August 4, 2026
Mumbai News Kannada
ಪ್ರಕಟಣೆ

ವಿದ್ಯಾವಿಹಾರ್ ದೇವಸ್ಥಾನದಲ್ಲಿ ನಾಳೆ (ಮಾರ್ಚ್ 15) ‘ಶ್ರೀ ರಾಮ ವನಗಮನ’ ತಾಳಮದ್ದಳೆ: ಇಬ್ಬರು ಹಿರಿಯ ಕಲಾವಿದರಿಗೆ ಸನ್ಮಾನ





ಮುಂಬಯಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಮತ್ತು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ 24 ಕಂತುಗಳ ‘ಶ್ರೀ ರಾಮ ಕಥಾ ಹೃದಯಂ’ ತಾಳಮದ್ದಳೆ ಸರಣಿಯ ಮೂರನೇ ಪ್ರಸ್ತುತಿಯು ನಾಳೆ ನಡೆಯಲಿದೆ.

​ದಿನಾಂಕ ಮಾರ್ಚ್ 15ರ ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ, ವಿದ್ಯಾವಿಹಾರ್ (ಪಶ್ಚಿಮ) ಗಾಮ್‌ದೇವಿ ಮಾರ್ಗದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನದಲ್ಲಿ ‘ಶ್ರೀ ರಾಮ ವನಗಮನ’ ಪ್ರಸಂಗದ ತಾಳಮದ್ದಳೆ ಆಯೋಜಿತವಾಗಿದೆ.

​ಪ್ರಭು ರಾಮಚಂದ್ರನ ಅವತಾರದಿಂದ ನಿರ್ಯಾಣದವರೆಗಿನ ಸಂಪೂರ್ಣ ರಾಮ ಚರಿತ್ರೆಯನ್ನು ಪುಣ್ಯಪ್ರದವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಭಾಗವಾಗಿ, ಮುಂಬಯಿ ಯಕ್ಷಗಾನ ಕ್ಷೇತ್ರದಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಇಬ್ಬರು ಹಿರಿಯ ಕಲಾವಿದರನ್ನು ಅಂದು ವಿಶೇಷವಾಗಿ ಗೌರವಿಸಲಾಗುವುದು.

​ವೇದಮೂರ್ತಿ ಪೆರ್ಣಂಕಿಲ ಶ್ರೀ ಹರಿದಾಸ ಭಟ್ ಅವರ ಆಶಯದಂತೆ, ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಮತ್ತು ಭಕ್ತಾದಿಗಳು ಪಾಲ್ಗೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಬೊಯಿಸರ್ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ತಾ.29 ರಂದು ಗುರುಪೂರ್ಣಿಮೆ ಉತ್ಸವ ಆಚರಣೆ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ಜುಲೈ 11 ರಂದು ಸುವರ್ಣ ಸಂಭ್ರಮದ ಉದ್ಘಾಟನಾ ಸಮಾರಂಭ ಹಾಗು ಸರಣಿ ಕಾರ್ಯಕ್ರಮಕ್ಕೆ ಚಾಲನೆ.

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ :ಜುಲೈ 5 ರಂದು “ಶ್ರೀ ಜಗನ್ನಾಥ ಕ್ಷೇತ್ರ ಮಹಿಮೆ” ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ

Mumbai News Desk

ಜುಲೈ 20 : ವೀರ ಕೇಸರಿ ಸಂಘ ಮೀರಾ -ಭಾಯಂದರ್ ವತಿಯಿಂದ ಭಗವದ್ಗೀತಾ ಪರೀಕ್ಷಾ ಸ್ಪರ್ಧೆ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್. ಜು.10, ಗುರು ಪೂರ್ಣಿಮೆ ಆಚರಣೆ

Mumbai News Desk