September 6, 2026
Mumbai News Kannada
ಪ್ರಕಟಣೆ

ಶ್ರೀ ವಿಠೋಬ ಗೋಪಾಲಕ್ರಷ್ಣ ಭಜನಾ ಮಂದಿರ ಹೆಜಮಾಡಿ : ಎ. 21(ಇಂದು) ರಂದು ವಾರ್ಷಿಕ ಮಂಗಳೋತ್ಸವ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ





.

ಉಡುಪಿ ತಾಲೂಕು, ಹೆಜಮಾಡಿ ಕೋಡಿಯ ಶ್ರೀ ವಿಠೋಬ ಗೋಪಾಲಕ್ರಷ್ಣ ಭಜನಾ ಮಂದಿರದಲ್ಲಿ 108ನೇ ವಾರ್ಷಿಕ ಮಂಗಲೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಏಪ್ರಿಲ್ 21, 2026ರ ಮಂಗಳವಾರದಂದು ಬಹಳ ವಿಜೃಂಭಣೆಯಿಂದ ಜರುಗಲಿದೆ. ಅಂದು ಬೆಳಿಗ್ಗೆ 8:00 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ನವಕ ಪ್ರಧಾನ ಕಲಶ ಹೋಮ ಮತ್ತು ಪುಣ್ಯಾಹವಾಚನದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿವೆ. 9:30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಲಿದ್ದು, ಮಧ್ಯಾಹ್ನ 12:00 ಗಂಟೆಗೆ ಮಹಾಪೂಜೆ ಹಾಗೂ ಪಲ್ಲಪೂಜೆ ನಡೆಯಲಿದೆ. ಮಧ್ಯಾಹ್ನ 12:30ರಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 1:00 ಗಂಟೆಗೆ ದೀಪ ಪ್ರಜ್ವಲನೆ( ಜೋಧ್‌ಪುರದ ಆರ್ಮಿ ಸಿಗ್ನಲ್ ಇಂಟೆಲಿಜೆನ್ಸ್‌ನ ಜೂನಿಯರ್ ಕಮಿಷನ್ಡ್ ಆಫೀಸರ್ ಚಂದ್ರಹಾಸ ಸಾಲಿಯಾನ್, ಮುಲ್ಕಿ ನಗರ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ಸತೀಶ್ ಅಂಚನ್, ಅವರಿಂದ )
ಬಳಿಕ ಸಂಕೀರ್ತನೆ ಆರಂಭಗೊಳ್ಳಲಿದೆ. ರಾತ್ರಿ 8:30ಕ್ಕೆ ಭಜನಾ ಮಂಗಳೋತ್ಸವದೊಂದಿಗೆ ಪ್ರಸಾದ ವಿತರಣೆ ನಡೆಯಲಿದ್ದು, ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ವಿಠೋಬ ಗೋಪಾಲಕೃಷ್ಣ ಭಜನಾ ಮಂದಿರ, ಶ್ರೀ ವಿಠೋಬ ಗೋಪಾಲಕೃಷ್ಣ ಮಹಿಳಾ ಮಂಡಳಿ ಹಾಗೂ ಶ್ರೀ ವಿಠೋಬ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.



Related posts

ಕುಮಾರ  ಕ್ಷತ್ರಿಯ ಸಂಘ  59 ನೇ ವಾರ್ಷಿಕ ಮಹಾಸಭೆ, ಪೆ.16 :   ಸತ್ಯನಾರಾಯಣ ಮಹಾಪೂಜೆ, ಹಳದಿ ಕುಂಕುಮ

Mumbai News Desk

ಪೆ 4:   ಮಲಾಡ್ ಶ್ರೀ   ಮಹತೋಭಾರ ಶನೀಶ್ವರ ದೇವಸ್ಥಾನ  ದಸುವರ್ಣ ಸಂಭ್ರಮದ  ಕಾರ್ಯಕ್ರಮ ಸಮಾಲೋಚನಾ ಸಭೆ

Mumbai News Desk

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಜುಲೈ 29ರಂದು ಗುರು ಪೂರ್ಣಿಮಾ ಮಹೋತ್ಸವ ಹಾಗೂ ನೂತನ ಪೀಠ ಉದ್ಘಾಟನೆ

Mumbai News Desk

    ಕುಲಾಲ ಸಂಘ ಮುಂಬಯಿ :  ಅ 27ರಂದು  94ನೇ ವಾರ್ಷಿಕ ಮಹಾಸಭೆ.

Mumbai News Desk

ಸಾಲಿಯಾನ್ ಆದಿ ಮೂಲಸ್ಥಾನ ಫಲಿಮಾರು : ಮೇ. 3ರಿಂದ ಮೇ 9ರ ತನಕ ನಾಗದೇವರಿಗೆ ಅಶ್ಲೇಷ ಬಲಿ, ನೂತನ ಗೋಪುರ ಸಮರ್ಪಣೆ, ನಾಗದೇವರ ಧರ್ಮದೈವಗಳ ವಾರ್ಷಿಕ ಉತ್ಸವ, ಧರ್ಮದೈವಗಳ ನೇಮೋತ್ಸವ.

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ವತಿಯಿಂದ (ನಾಳೆ) ಫೆ.26 ರಂದು ಪಾನಕ ಸೇವೆ

Mumbai News Desk