September 14, 2026
Mumbai News Kannada
ಮುಂಬಯಿ

ಆಟಿಡೊಂಜಿ ಅಟೀಲ್ ಹಾಗೂ ಶೈಕ್ಷಣಿಕ ಸಹಾಯ ಧನ ವಿತರಣೆ: ಧಾರ್ಮಿಕ ಕಾರ್ಯದೊಂದಿಗೆ ನಾಡಿನ ಸಂಸ್ಕೃತಿಯನ್ನು ಉಳಿಸುತ್ತಿರುವುದು ಅಭಿನಂದನೀಯ – ಉದಯ ಶೆಟ್ಟಿ ಮಲ್ಲಾರ್ ಬೀಡು






ವರದಿ: ದಿನೇಶ್ ಕುಲಾಲ್


ಮುಂಬಯಿ: ಶ್ರೀ ಗುರುನಾರಾಯಣ ಭಜನಾ ಮಂಡಳಿ, ಮೀರಾ-ಬಾಯಂಧರ್ ಶಾಖೆ ಮತ್ತು ಜಯ ಸಿ. ಸುವರ್ಣ ಅಭಿಮಾನಿ ಬಳಗದ ಜಂಟಿ ಆಶ್ರಯದಲ್ಲಿ ‘ಆಟಿಡೊಂಜಿ ಅಟೀಲ್’ ಹಾಗೂ ಶೈಕ್ಷಣಿಕ ಸಹಾಯ ವಿತರಣಾ ಕಾರ್ಯಕ್ರಮವು ಜುಲೈ 26 ರಂದು ಸಂಜೆ ಬಾಯಂಧರ್ ಪೂರ್ವದ ಬಿ. ಪಿ. ರಸ್ತೆಯಲ್ಲಿರುವ ಮಂಗಳಮೂರ್ತಿ ಸಭಾಗೃಹದಲ್ಲಿ ಅದ್ದೂರಿಯಾಗಿ ನೆರವೇರಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಅರ್ಹ ಮಕ್ಕಳಿಗೆ ಆರ್ಥಿಕ ಸಹಾಯ ಧನ ವಿತರಿಸಿ ಮಾತನಾಡಿದ ಶಾಸಕ ನರೇಂದ್ರ ಮೆಹ್ತಾ ಅವರು, “ಮನೆಯಲ್ಲಿ ತಯಾರಿಸಿದ ನಾಡಿನ ತಿಂಡಿ-ತಿನಿಸುಗಳು ಉತ್ತಮ ಆರೋಗ್ಯ ನೀಡುತ್ತವೆ. ಇಂದು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಹಾಗೂ ನಮ್ಮ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ನಿಜಕ್ಕೂ ಅಭಿನಂದನೀಯ,” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಬಂಟ್ಸ್ ಪಾರಂ ಮೀರಾ-ಭಾಯಂಧರ್‌ನ ಅಧ್ಯಕ್ಷ ಉದಯ ಶೆಟ್ಟಿ ಮಲ್ಲಾರ್ ಬೀಡು ಮಾತನಾಡಿ, “ನಾಡಿನ ಸಂಸ್ಕೃತಿಯನ್ನು ಉಳಿಸುವ ‘ಆಟಿ’ ಕಾರ್ಯಕ್ರಮದೊಂದಿಗೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯತ್ತ ಗಮನ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರೆ, ಮುಂದೆ ಅವರು ಬೆಳೆದು ಇಂತಹ ಸಂಘಟನೆಗಳಿಗೆ ಸಹಕರಿಸಲಿದ್ದಾರೆ. ಬಂಟ ಸಮಾಜದಲ್ಲಿ ಜಯ ಸಿ. ಸುವರ್ಣರ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿದ್ದು, ನನ್ನ ಉದ್ಯಮದ ಬೆಳವಣಿಗೆಗೆ ಭಾರತ್ ಬ್ಯಾಂಕಿನ ಕೊಡುಗೆ ಅಪಾರ,” ಎಂದರು.


ಜಯ ಸಿ. ಸುವರ್ಣ ಅಭಿಮಾನಿ ಬಳಗದ ಮೀರಾ-ಬಾಯಂಧರ್ ಶಾಖೆಯ ಕಾರ್ಯಾಧ್ಯಕ್ಷ ಉದಯ ಡಿ. ಸುವರ್ಣ ಮಾತನಾಡಿ, “ಪರಿಸರದ ಬಂಧುಗಳ ಸಹಕಾರದಿಂದ ನಮ್ಮ ಸೇವಾ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ನಮ ಜವನೆರ್ ಮೀರಾ-ಬಾಯಂಧರ್‌ನ ಅಧ್ಯಕ್ಷ ಚೇತನ್ ಎಸ್. ಶೆಟ್ಟಿ ಮೂಡಬಿದಿರೆ ಮಾತನಾಡಿ, “ಹಿಂದಿನ ಕಾಲದಲ್ಲಿ ಹಿರಿಯರು ಕಷ್ಟಪಟ್ಟು ದುಡಿದು, ಆಟಿ ತಿಂಗಳಲ್ಲಿ ತಯಾರಿಸಿ ಉಣ್ಣುತ್ತಿದ್ದ ಆಹಾರವು ಮದ್ದಿಗೆ ಸಮಾನವಾಗಿತ್ತು. ಅದರಿಂದಾಗಿಯೇ ಅವರು ದೀರ್ಘಾಯುಷ್ಯ ಪಡೆಯುತ್ತಿದ್ದರು,” ಎಂದು ಸ್ಮರಿಸಿದರು.
ಸ್ಥಳೀಯ ನಗರಸೇವಕ ತರಣ್ ಶರ್ಮಾ ಮಾತನಾಡಿ, “ತುಳು-ಕನ್ನಡಿಗರು ನನಗೆ ಅತ್ಯಂತ ಹತ್ತಿರದವರಾಗಿದ್ದು, ಅವರೊಂದಿಗೆ ಸದಾ ಉತ್ತಮ ಬಾಂಧವ್ಯ ಹೊಂದಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದ ಒಗ್ಗಟ್ಟನ್ನು ಬಲಪಡಿಸುತ್ತವೆ,” ಎಂದರು.
ತುಳು ಕನ್ನಡ ವೆಲ್ಫೇರ್ ಅಸೋಷಿಯೇಶನ್ನಿನ ಕಾರ್ಯಾಧ್ಯಕ್ಷ ಹರೀಶ್ ಸುವರ್ಣ ಅವರು ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭಕೋರಿದರು.


ಖ್ಯಾತ ಸಾಹಿತಿ ಹಾಗೂ ಲೇಖಕಿ ಲತಾ ಸಂತೋಷ್ ಶೆಟ್ಟಿ ಆಟಿ ಆಚರಣೆಯ ಕುರಿತು ಸಂಕ್ಷಿಪ್ತವಾಗಿ ಮಾತನಾಡಿ, “ಯುವ ಜನಾಂಗವು ಪಿಜ್ಜಾ-ಬರ್ಗರ್‌ಗಳತ್ತ ಆಕರ್ಷಿತರಾಗುತ್ತಿರುವ ಈ ಕಾಲಘಟ್ಟದಲ್ಲಿ, ಮನೆಯಲ್ಲೇ ತಯಾರಿಸಿದ ‘ಆಟಿದ ಅಟೀಲ್’ ತಿಂಡಿಗಳು ಮಕ್ಕಳಲ್ಲಿ ಉತ್ತಮ ಸಾಂಸ್ಕೃತಿಕ ಬದಲಾವಣೆಯನ್ನು ತರಲಿ,” ಎಂದು ಆಶಿಸಿದರು.
ವೇದಿಕೆಯಲ್ಲಿ ಶೋಭಾ ಶೇಖರ್ ಶೆಟ್ಟಿ, ದೇವಿಕಾ ಸದಾಶಿವ ಕರ್ಕೇರ, ಸಬಿತ ಜಿ. ಪೂಜಾರಿ, ಸುಮಿತ್ರ ಕರ್ಕೇರ, ಲತಾ ಸುವರ್ಣ, ಸವಿತ ಜಿ. ಪೂಜಾರಿ, ಮಂಡಳಿಯ ಗೌರವ ಕಾರ್ಯಾಧ್ಯಕ್ಷರಾದ ಶಿವಾನಂದ ಬಂಗೇರ, ಸದಾನಂದ ಪೂಜಾರಿ ಹಾಗೂ ಮೋಹನ್ ಜಿ. ಪೂಜಾರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಿಸಲಾಯಿತು ಹಾಗೂ 10ನೇ ತರಗತಿ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶ್ರೀ ಗುರುನಾರಾಯಣ ಭಜನಾ ಮಂಡಳಿ ಹಾಗೂ ಜಯ ಸಿ. ಸುವರ್ಣ ಅಭಿಮಾನಿ ಬಳಗದ ಮಹಿಳಾ ಘಟಕದ ಸದಸ್ಯೆಯರು ಮನೆಯಲ್ಲಿ ಸಿದ್ಧಪಡಿಸಿದ ವಿವಿಧ ಶೈಲಿಯ ಸವಿಯಾದ ಖಾದ್ಯಗಳನ್ನು ನೆರೆದವರಿಗೆ ಉಣಬಡಿಸಿದರು. ಶಶಿಧರ ಬಂಗೇರ ಹಾಗೂ ಸದಾನಂದ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕ ನಿರಂಜನ ಎಲ್. ಪೂಜಾರಿ, ಶ್ರೀ ಗುರುನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಸಸಿಹಿತ್ತ್ಲು ಹಾಗೂ ಪ್ರಮುಖ ಪದಾಧಿಕಾರಿಗಳಾದ ನರೇಶ್ ಕೆ. ಪೂಜಾರಿ, ತಿಮ್ಮಪ್ಪ ಪೂಜಾರಿ, ನಾರಾಯಣ ಸುವರ್ಣ, ಮಾಧವ ಆರ್. ಸುವರ್ಣ, ಎ.ಕೆ. ಹರೀಶ್, ದಯಾನಂದ ಸುವರ್ಣ, ಶೇಖರ್ ಪೂಜಾರಿ, ಗೌರವ ಕಾರ್ಯದರ್ಶಿ ಮಾಲತಿ ಆರ್. ಬಂಗೇರ, ಜೊತೆ ಕಾರ್ಯದರ್ಶಿಗಳಾದ ಶಾಂತಾ ಎ. ಪೂಜಾರಿ, ಬೇಬಿ ವಿ. ಪೂಜಾರಿ, ಗೌರವ ಕೋಶಾಧಿಕಾರಿ ಶೋಭಾ ಕೋಟ್ಯಾನ್, ಜೊತೆ ಕೋಶಾಧಿಕಾರಿಗಳಾದ ಚಂದ್ರಾವತಿ ಎಲ್. ಪೂಜಾರಿ ಹಾಗೂ ಕಲಾ ಪೂಜಾರಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಅಧ್ಯಕ್ಷೆ ಸುಮಿತ್ರಾ ಕರ್ಕೇರ, ಉಪಾಧ್ಯಕ್ಷೆಯರಾದ ನಿರಂಜನಿ ಪೂಜಾರಿ, ಶಕುಂತಲಾ ಪೂಜಾರಿ, ಕಾರ್ಯದರ್ಶಿ ವಸಂತಿ ಪೂಜಾರಿ, ಜೊತೆ ಕಾರ್ಯದರ್ಶಿ ವಿಶಾಲಾಕ್ಷಿ ಮುಲ್ಕಿ, ಅರ್ಚಕ ಸದಾನಂದ ಸುವರ್ಣ ಹಾಗೂ ಸಮಿತಿಯ ಸದಸ್ಯರುಗಳಾದ ವಾಸುದೇವ ಪೂಜಾರಿ, ಸುಂದರ್ ಪೂಜಾರಿ, ರವೀಂದ್ರ ಬಂಗೇರ, ಉಮೇಶ್ ಬಾರ್ಕೂರು, ವಿಶ್ವನಾಥ ಪೂಜಾರಿ, ಅಶೋಕ್ ಕರ್ಕೇರ, ಲೋಕನಾಥ ಪೂಜಾರಿ, ಗಂಗಾಧರ ಪೂಜಾರಿ, ಸೌಮ್ಯ ಪೂಜಾರಿ, ಶ್ವೇತಾ ಪೂಜಾರಿ, ವನಿತಾ ಅಮೀನ್, ಉಷಾ ಪೂಜಾರಿ, ಸವಿತಾ ಪೂಜಾರಿ, ಶೇಭಾ ಕೋಟ್ಯಾನ್, ಜಯಾ ಕೋಟ್ಯಾನ್, ಪುಷ್ಪಾ ಪೂಜಾರಿ, ಜಯಲಕ್ಷ್ಮಿ ಪೂಜಾರಿ, ಗುಣಾ ಪೂಜಾರಿ, ಶಿವರಾಮ ಪೂಜಾರಿ, ಲೀಲಾ ಪೂಜಾರಿ, ಸ್ನೇಹಲತಾ ಪೂಜಾರಿ, ಪದ್ಮಾವತಿ ಪೂಜಾರಿ, ಜಯಾ ಎಸ್. ಪೂಜಾರಿ, ಸುಜಾತಾ ಎಸ್. ಪೂಜಾರಿ, ಕುಶಲಾ ಎಸ್. ಪೂಜಾರಿ, ತರುಣ್ ಮುಲ್ಕಿ, ಶ್ರೀನಿವಾಸ್ ಸುವರ್ಣ, ಶೋಭಾ ಎ. ಪೂಜಾರಿ, ರವೀಂದ್ರ ಪೂಜಾರಿ, ಪ್ರೇಮಾ ಎಸ್. ಪೂಜಾರಿ, ಕವಿತಾ ಎ. ಪೂಜಾರಿ, ರಘುನಾಥ ಹಳೆಯಂಗಡಿ, ಬೇಬಿ ಪೂಜಾರಿ, ಸುನೀತಾ ಪೂಜಾರಿ, ಸರೋಜಿನಿ ವಿ. ಪೂಜಾರಿ, ಲೀಲಾ ಗಣೇಶ್, ಗುಣವತಿ ಪೂಜಾರಿ, ಧನಲಕ್ಷ್ಮಿ ಪೂಜಾರಿ, ದಾನಶೀಲಾ ಪೂಜಾರಿ, ಬಲರಾಜ್ ಎಸ್. ಕೋಟ್ಯಾನ್ ಮತ್ತು ಗೀತಾ ಪೂಜಾರಿ ಉಪಸ್ಥಿತರಿದ್ದು ಸಹಕರಿಸಿದರು.

ಯುವ ವಿಭಾಗದ ಗಣೇಶ್ ಬಂಗೇರ, ತೇಜಸ್ ಪೂಜಾರಿ, ಸುರೇಶ್ ಪೂಜಾರಿ, ದಯಾನಂದ ಕೋಟ್ಯಾನ್, ಪ್ರದೀಪ್ ಪೂಜಾರಿ, ನವ್ಯಾ ಪೂಜಾರಿ, ಕೇಶವ ಪೂಜಾರಿ, ಸಾನ್ವಿ ಎಸ್. ಸುವರ್ಣ, ಪ್ರಾಚಿ ಪೂಜಾರಿ, ಸಾತ್ವಿಕ್ ಎಸ್. ಸುವರ್ಣ, ಖುಷಿ ಪೂಜಾರಿ, ಪ್ರಿತೇಶ್ ಪೂಜಾರಿ, ವಿದ್ಯಾ ಪೂಜಾರಿ, ರಚನಾ ಬಂಗೇರ, ಶ್ರಜನ ಎಸ್. ಪೂಜಾರಿ, ಶ್ರುತಾಂಶ್ ಎಸ್. ಪೂಜಾರಿ ಮತ್ತು ರೆಚಲ್ ಪೂಜಾರಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.



Related posts

ಎಸ್.ಎಸ್.ಸಿ ಪರೀಕ್ಷೆ: ನೆರೂಲ್‌ನ ನಿರೋಷಾ ಸಾಲಿಯನ್‌ಗೆ ಶೇ. 92.6 ಅಂಕ.

Mumbai News Desk

ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಆಯೋಜನೆಯಲ್ಲಿ ಸರಣಿ ತಾಳಮದ್ದಳೆಯ ದಶಮ ಪ್ರಸ್ತುತಿ: ಕಲಾವಿದರಿಗೆ ಸನ್ಮಾನ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದಆಷಾಢ ಹಬ್ಬ ಆಚರಣೆ

Mumbai News Desk

ಸಾಲಿಯಾನ್ ಮೂಲಸ್ಥಾನ ಸಭಾ (ಎರ್ಮಾಳು ಬಡಾ) ಮುಂಬೈ ಶಾಖೆಯ ವಾರ್ಷಿಕ ಮಹಾಸಭೆ

Mumbai News Desk

ಮಜಗಾಂವ್‌ನಲ್ಲಿ ಗಣಪತಿ ಮೆರವಣಿಗೆ ವೇಳೆ ಮೊಟ್ಟೆ ಎಸೆತ; ಕೆಲಕಾಲ ಉದ್ವಿಗ್ನ ಪರಿಸ್ಥಿತಿ

Mumbai News Desk

ವಿದ್ಯಾದಾಯಿನಿ ಸಭಾ ಮುಂಬಯಿ – ಶತ ಸಂಭ್ರಮದ ಉದ್ಘಾಟನೆ.

Mumbai News Desk