31 C
Mumbai
September 18, 2026
Mumbai News Kannada
ಪ್ರಕಟಣೆ

ಉಲ್ಲಾಸನಗರದಲ್ಲಿ ಆ.5ರಂದು ‘ಅಮಾತ್ಯ – ನಂದಿನಿ’ ಯಕ್ಷಗಾನ ಬಯಲಾಟ ಹಾಗೂ ಐರ್ ಬೈಲು ಆನಂದ ಶೆಟ್ಟರಿಗೆ ಸ್ವರ್ಣ ಸನ್ಮಾನ





ಉಲ್ಲಾಸನಗರ: ‘ಯಕ್ಷಕಾಶಿ’ ಎಂದೇ ಖ್ಯಾತಿ ಪಡೆದಿರುವ ಉಲ್ಲಾಸನಗರದಲ್ಲಿ ‘ಮುಂಬಯಿ ಕರಾವಳಿ ಕನ್ನಡಿಗರ ಒಕ್ಕೂಟ’ ಹಾಗೂ ಕುಂದ ಭಾಷಾ ಪ್ರೇಮಿಗಳ ಜಂಟಿ ಆಶ್ರಯದಲ್ಲಿ ಮುಂಬರುವ ಆಗಸ್ಟ್ 05, 2026 (ಬುಧವಾರ) ರಂದು ಸಂಜೆ 3.30ಕ್ಕೆ ‘ಬಡಗು ಯಕ್ಷ ಸಂಭ್ರಮ’ ಹಾಗೂ ಆಕರ್ಷಕ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಉಲ್ಲಾಸನಗರ-3ರ ಕಲ್ಯಾಣ್-ಅಂಬರ್‌ನಾಥ್ ರಸ್ತೆಯಲ್ಲಿರುವ ‘ರಾಯಲ್ ಮೆರಿಡಿಯನ್ ಹಾಲ್’ (ರಿಜೆನ್ಸಿ ಪ್ಲಾಜಾ, ಶಾಂತಿ ನಗರ) ನಲ್ಲಿ ನಡೆಯಲಿರುವ ಈ ಅದ್ದೂರಿ ಸಮಾರಂಭದಲ್ಲಿ ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಅಭ್ಯರ್ಥಿ/ಕಲಾವಿದರಿಂದ ಗತಕಾಲದ ವೈಭವದ ಬಹುಪ್ರಸಿದ್ಧ ಪ್ರಸಂಗ ‘ಅಮಾತ್ಯ – ನಂದಿನಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಬಡಗು ಯಕ್ಷರಂಗದ ‘ನಟ ಸಾರ್ವಭೌಮ’, ‘ರಂಗಸ್ಥಳದ ರಾಜ’, ‘ಯಕ್ಷಕಣ್ಣನ್’ ಎಂದೇ ಪ್ರಸಿದ್ಧರಾಗಿರುವ, ಯಕ್ಷರಂಗದಲ್ಲಿ 50 ಸಂವತ್ಸರಗಳನ್ನು ಪೂರೈಸಿರುವ ಐರ್ ಬೈಲು ಶ್ರೀ ಆನಂದ ಶೆಟ್ಟಿ ಅವರಿಗೆ ಈ ಶುಭ ಸಂದರ್ಭದಲ್ಲಿ ‘ಸ್ವರ್ಣ ಸಂಭ್ರಮದ ಅಭಿನಂದನಾ ಸನ್ಮಾನ’ ನೆರವೇರಲಿದೆ. ಕುಂದಾಪುರ ತಾಲೂಕಿನ ಸಿದ್ಧಾಪುರ ಸೀಮೆಯ ಇರಬೈಲು ಮೂಲದವರಾದ ಆನಂದ ಶೆಟ್ಟಿಯವರು ಮಾರಣಕಟ್ಟೆ ಮೇಳದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿ, ರಂಗಸ್ಥಳದಲ್ಲಿ ಸತ್ತ್ವಪೂರ್ಣ ಅಭಿನಯ ನೀಡಿದ ಮಹಾನ್ ಕಲಾವಿದರಾಗಿದ್ದಾರೆ.

ಸುಪ್ರಸಿದ್ಧ ಕಲಾ ಸಂಘಟಕರು, ಯಕ್ಷಕಲಾ ಪ್ರೇಮಿ ಹಾಗೂ ಕುಂದಾಪುರ ಕುಂದಗನ್ನಡ ಭಾಷಾಭಿಮಾನಿ ಶ್ರೀ ಅನಿಲ್ ಶೆಟ್ಟಿ, (ವಕ್ಕೇರಿ) ಅವರ ನೇತೃತ್ವ ಹಾಗೂ ಸಂಯೋಜನೆಯಲ್ಲಿ ಈ ಬೃಹತ್ ಕಾರ್ಯಕ್ರಮ ಮೂಡಿಬರಲಿದೆ.


ಕಾರ್ಯಕ್ರಮದ ವ್ಯವಸ್ಥಾಪಕರು (ಸಂಘಟಕರು):
ಶ್ರೀ ಅನಿಲ್ ಶೆಟ್ಟಿ (ವಕ್ಕೇರಿ), ಶ್ರೀ ಪ್ರಸನ್ನ ಶೆಟ್ಟಿ (ಬೆಳ್ಳಂಪಳ್ಳಿ), ಶ್ರೀ ಪ್ರಶಾಂತ್ ಶೆಟ್ಟಿ (ಬೆಳ್ಳಂಪಳ್ಳಿ), ಶ್ರೀ ಆರ್ಡಿ ಉದಯ ಶೆಟ್ಟಿ, ಶ್ರೀ ಸುಧೀರ ಶೆಟ್ಟಿ (ವಂದ್ಸೆ), ಶ್ರೀ ಸುರೇಂದ್ರ ಶೆಟ್ಟಿ (ಸರಿಗಮ), ಶ್ರೀ ದೀಕ್ಷಿತ್ ಶೆಟ್ಟಿ, ಶ್ರೀ ರಘು ಶೆಟ್ಟಿ (ಕಾನ್ವಿ) ಹಾಗೂ ಶ್ರೀ ಜಗದೀಶ್ ಶೆಟ್ಟಿ ಬೇಳಂಜೆ.

ಯಕ್ಷಗಾನ ಕಲೆಯನ್ನು ಮುಂಬಯಿ ಮಾಯಾನಗರದಲ್ಲಿ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕಲಾತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ಶ್ರೀಮತಿ ಪ್ರವೀಣಾ ಪ್ರಕಾಶ್ ಶೆಟ್ಟಿ ಮತ್ತು ಶ್ರೀ ಪ್ರಕಾಶ್ ಶೆಟ್ಟಿ, ಕಲ್ಯಾಣ್ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಸಮಸ್ತ ಕಲಾಭಿಮಾನಿಗಳಿಗೆ ಫಲಾಹಾರ ಹಾಗೂ ಪ್ರೀತಿಯ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಮುಂಬಯಿ ಕರಾವಳಿ ಕನ್ನಡಿಗರ ಒಕ್ಕೂಟವು ಎಲ್ಲಾ ಯಕ್ಷಕಲಾ ಪ್ರೇಮಿಗಳು, ಕುಂದ ಭಾಷಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವೈಭವದ ‘ಅಮಾತ್ಯ-ನಂದಿನಿ’ ಯಕ್ಷಗಾನ ಬಯಲಾಟ ಮತ್ತು ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡಿದೆ.

ಮಾಹಿತಿ: ಸೀತಾರಾಮ್ ಶೆಟ್ಟಿ ಆರೂರು



Related posts

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು : ಅ. 3ರಿಂದ ಶರನ್ನವತಾತ್ರಿ ಮಹೋತ್ಸವ.

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ

Mumbai News Desk

ಸೆ.7 ರಂದು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ ಪ್ರಧಾನ ಸಮಾರಂಭ

Mumbai News Desk

ಆಮ್ಮೀ ರಂಗಕರ್ಮಿ, ಮುಂಬೈ ತಂಡದ- ಅ. 15, 17 ಮತ್ತು 18  ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೊಂಕಣಿ ನಾಟಕ ಪ್ರದರ್ಶನ.

Mumbai News Desk