August 27, 2026
Mumbai News Kannada
ಮುಂಬಯಿ

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ





ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಮುದಾಯದ ಸೇವೆ ಸಲ್ಲಿಸುತ್ತಿದ್ದೇವೆ ನಮ್ಮ ಸಂಘ ಯಾವುದೇ ಪರಿಸ್ಥಿತಿಯಲ್ಲೂ ವಿದ್ಯಾರ್ಥಿವೇತನ ವಿತರಣೆಯನ್ನು ನಿಲ್ಲಿಸಲಿಲ್ಲ.ನಾವೆಲ್ಲರೂ ಸೇರಿ ದೇಣಿಗೆ ಸಂಗ್ರಹಿಸಿ ಅಲ್ಪ ಸ್ವಲ್ಪವಾದರೂ ಸಮುದಾಯದ ವಿದ್ಯಾರ್ಥಿಗಳಿಗೆ ನಮ್ಮ ಕುಲಮಾತೆಯ ಪ್ರಸಾದ ಎಂಬಂತೆ ನೀಡುತ್ತಾ ಬಂದಿದ್ದೇವೆ. ಇಂದು ಭಾಸ್ಕರ ಶ್ರೀಯಾನ್ ಮತ್ತು ತಂಡ ಅದ್ಭುತವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ವಿದ್ಯಾರ್ಥಿವೇತನ ವಿತರಣೆ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ನಾವು ಸಾಕಷ್ಟು ಬಾರಿ ಯೋಚಿಸಿದ್ದೇವೆ ಏಕೆಂದರೆ ಅಂದು ನಾವು ಪಟ್ಟ ಪಾಡು ನಮ್ಮ ಸಮುದಾಯದ ಮಕ್ಕಳು ಪಡಬಾರದು ಎಂದು ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ಗೌರವಾಧ್ಯಕ್ಷ ಸುರೇಶ ಆರ್. ಕಾಂಚನ್ ಹೇಳಿದರು.


ಅವರು ಆ.22 ರಂದು ಶನಿವಾರ ಸಂಜೆ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘದ ಅಧ್ಯಕ್ಷ ಸಂತೋಷ ಪುತ್ರನ್ ನೇತ್ರತ್ವದಲ್ಲಿ ಒಳ್ಳೆಯ ಕೆಲಸ ನೆಡೆಯುತ್ತಿದೆ ನಾನು ಅವರಿಗೆ ಸಲಹೆ ನೀಡಿರುವುದೇನೆಂದರೆ ನಾವು ಒಂದುವರೆ ಕೋಟಿ ರೂಪಾಯಿ ಸಂಗ್ರಹಿಸಿ ಅದರಲ್ಲಿ ಒಂದು ಕೋಟಿ ರೂಪಾಯಿ ವಿದ್ಯಾನಿಧಿ ಮತ್ತು 50 ಲಕ್ಷ ರೂಪಾಯಿಯ ಆರೋಗ್ಯ ನಿಧಿಯ ಎರಡು ಪ್ರತ್ಯೇಕ ನಿರಖು ಠೇವಣಿ ಇಟ್ಟರೆ ಅದರಿಂದ ಬರುವ ಬಡ್ಡಿಯಲ್ಲಿ ನಮ್ಮ ಸಮುದಾಯದ ಮಕ್ಕಳಿಗೆ ಇನ್ನು ಹೆಚ್ಚಿನ ಸಹಾಯಧನ ನೀಡಬಹುದು ಎಂಬುದು ನಮ್ಮ ಯೋಚನೆ. ಸಮಾಜಕ್ಕಾಗಿ ನೀವು ನೀಡಿದ ದೇಣಿಗೆ ವ್ಯರ್ಥವಾಗುವುದಿಲ್ಲ ಈವರೆಗೆ ನಾವೆಲ್ಲರೂ ಸೇರಿ ನಮ್ಮ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದೇವು ಆದರೆ ಭವಿಷ್ಯದ ಬಗ್ಗೆ ಗೊತ್ತಿಲ್ಲ ಆಗ ಈ ನಿಧಿ ಸಮಾಜಕ್ಕೆ ನೆರವಾಗುತ್ತದೆ. ನಮ್ಮದು ಬಡ ಸಮಾಜವಾದರೂ ಎಲ್ಲರಿಗೂ ಸರಿ ಸಮಾನರಂತೆ ನಿಂತಿದ್ದೇವೆ ಈ ಸಮಾಜದಲ್ಲಿ ಹುಟ್ಟಿರುವುದಕ್ಕೆ ಧನ್ಯತಾ ಭಾವ ಮೂಡಿದೆ ನಿಮ್ಮೆಲ್ಲರ ಸಹಕಾರ ನಮ್ಮ ಈ ಸಂಘಟನೆಯ ಮೇಲೆ ನಿರಂತರವಾಗಿರಲಿ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ಅಧ್ಯಕ್ಷ ಸಂತೋಷ ಕೆ. ಪುತ್ರನ್ ಮಾತನಾಡುತ್ತಾ ನಮ್ಮ ಸಂಘಕ್ಕೆ 85 ವರ್ಷದ ಇತಿಹಾಸವಿದೆ ಕಳೆದ ಹಲವಾರು ವರ್ಷಗಳಿಂದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ ಸಾವಿರಾರು ಮಕ್ಕಳು ಇದರ ಪ್ರಯೋಜನ ಪಡೆದು ಕೊಂಡಿರಬಹುದು ಈವರೆಗೆ ನಾವು ಕೆಲವೇ ಮಂದಿ ದೇಣಿಗೆ ತೆಗೆದು ಈ ವಿದ್ಯಾರ್ಥಿವೇತನ ನೀಡುತ್ತಾ ಬಂದಿದ್ದೇವೆ ಆದರೆ ಇದನ್ನೇ ಮುಂದುವರೆಸಲು ಸಾಧ್ಯವಿಲ್ಲ ಅದಕ್ಕೆ ನಾವು ಒಂದು ಶೈಕ್ಷಣಿಕ ನಿಧಿ ಸ್ಥಾಪಿಸುವ ಸಂಕಲ್ಪ ಮಾಡಿದ್ದೇವೆ. ಭಾಸ್ಕರ ಶ್ರೀಯಾನ್ ಅವರ ಸಹಕಾರದಿಂದ ಒಂದು ಉತ್ತಮ ಕಾರ್ಯಕ್ರಮ ಮಾಡಿದ್ದೇವೆ ಬಹು:ಶ ಸಂಘದ ಇತಿಹಾಸದಲ್ಲಿಯೇ ಒಂದು ವಿಜೃಂಭಣೆಯ ಕಾರ್ಯಕ್ರಮ ಎಂದು ಹೇಳಬಹುದು ಇದು ನನ್ನ ಅಧ್ಯಕ್ಷತೆಯಲ್ಲಿ ನೆಡೆದಿರುವುದು ಹೆಮ್ಮೆಯ ವಿಷಯ. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವು ಅಂಧೇರಿಯಲ್ಲಿ ಒಂದು ಸ್ಥಳವನ್ನು ಖರೀದಿಸಿದ್ದೇವೆ ಅದನ್ನು ಕೇಂದ್ರ ಕಚೇರಿಯಾಗಿ ಬಳಸಲಾಗುವುದು. ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಮಕ್ಕಳು ನಾಗರಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎನ್ನುವುದು ನಮ್ಮೆಲ್ಲರ ಮಹಾದಾಸೆ ನಾವು ವಿದ್ಯಾನಿಧಿಗಾಗಿ ಸಮುದಾಯ ಬಾಂಧವರನ್ನು ಸಂಪರ್ಕಿಸಲಿದ್ದೇವೆ ಒಂದು ದೊಡ್ಡ ಮೊತ್ತದ ಶಾಶ್ವತ ವಿದ್ಯಾನಿಧಿ ಇದ್ದರೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿವೇತನ ನೀಡಲು ಯಾವುದೇ ಸಮಸ್ಯೆಯಾಗುವುದಿಲ್ಲ ಆ ನಿಟ್ಟಿನಲ್ಲಿ ನೀವೆಲ್ಲರೂ ಸಹಕರಿಸಬೇಕು ಎಂದರು.


ಗೌರವ ಅತಿಥಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ ಅಜಿತ್ ಜಿ. ಸುವರ್ಣ ಮಾತನಾಡುತ್ತಾ ಯುವ ಸಾಧಕರೆಲ್ಲರಿಗೂ ಅಭಿನಂದನೆಗಳು ನಮ್ಮ ಮೊಗವೀರ ಎಜುಕೇಶನ್ ಕ್ಯಾಂಪಸ್‌ನಲ್ಲಿ ಕೆಜಿ ಯಿಂದ ಪಿಜಿ ವರೆಗೂ ವಿದ್ಯಾಭ್ಯಾಸಕ್ಕೆ ಅವಕಾಶವಿದೆ ಅದರಲ್ಲಿ ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ 50% ರಿಯಾಯಿತಿ ನೀಡುತ್ತಿದ್ದೇವೆ ಅದರ ಸದುಪಯೋಗವನ್ನು ಸಮಾಜಬಾಂಧವರು ಪಡೆದುಕೊಳ್ಳಬೇಕು ನಮ್ಮ ವ್ಯವಸ್ಥಾಪಕ ಮಂಡಳಿ 125ರ ಸಂಭ್ರಮದಲ್ಲಿದೆ ತಾವೆಲ್ಲರೂ ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಶಿಕ್ಷಣಕ್ಕೆ ದೊರೆಯುವ ಸೌಲಭ್ಯ ಪಡೆಯಲು ಮುಂದೆ ಬರಬೇಕು ಎಂದರು.


ಗೌರವ ಅತಿಥಿ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಗಣೇಶ ಕಾಂಚನ್ ಮಾತನಾಡುತ್ತಾ ಇಂದಿನ ಕಾರ್ಯಕ್ರಮ ಅಧ್ಭುತವಾಗಿತ್ತು ಇಂದು ವಿದ್ಯಾರ್ಥಿವೇತನ ನೀಡಿರುವುದು ಇದು ವಿದ್ಯಾರ್ಥಿಗಳಿಗೆ ಸಮುದಾಯದ ಆಶೀರ್ವಾದ. ನಮ್ಮ ಸಮಾಜದಲ್ಲಿ ಮುಂಬರುವ ದಿನಗಳಲ್ಲಿ ಯುವ ಜನರು ಐಎಎಸ್, ಐಪಿಎಸ್, ಐಆರ್‌ಎಸ್‌ನಲ್ಲಿ ಸಾಧನೆಗೈದರೆ ಅದು ನಮ್ಮ ಸಮಾಜಕ್ಕೆ ಹೆಮ್ಮೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಗಮನಹರಿಸಬೇಕು ನಮ್ಮ ಸಮುದಾಯದ ಮಕ್ಕಳು ಉನ್ನತ ವಿದ್ಯಾಭ್ಯಾಸಗೈದರೆ ಅದು ನಮಗೆಲ್ಲ ಹೆಮ್ಮೆ ಸಮುದಾಯ ಬಾಂಧವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಎನಾದರೂ ತೊಂದರೆಯಾದರೆ ಅದನ್ನು ಪರಿಹರಿಸಲು ನಮ್ಮ ಮೊಗವೀರ ವ್ಯವಸ್ಥಾಪಕ ಮಂಡಳಿ ಸದಾ ಸಮುದಾಯ ಬಾಂಧವರ ಬೆನ್ನಿಗಿದೆ ಎಂದರು.
ಗೌರವ ಅತಿಥಿ ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ಮಾಜಿ ಅಧ್ಯಕ್ಷ ಮಹಾಬಲ ಎಮ್. ಕುಂದರ್ ಮಾತನಾಡುತ್ತಾ ಸಂಘಕ್ಕೆ ಯಾರೇ ದೇಣಿಗೆ ನೀಡಿದರೂ ಅದು ಒಳ್ಳೆಯ ಕೆಲಸಕ್ಕೆ ವಿನಿಯೋಗವಾಗುತ್ತದೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದೆ ತಾವು ದುಡಿಯುವಾಗ ನಮ್ಮ ವಿದ್ಯಾನಿಧಿಗೆ ಸಹಕಾರ ನೀಡಬೇಕು ಅದರಿಂದ ಮುಂಬರುವ ದಿನಗಳಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವನ್ನು ನಮ್ಮ ಸಂಘದಿಂದ ಮಾಡಬಹುದು. ಭಗವಂತ ಕಣ್ಣಿಗೆ ಕಾಣದಿದ್ದರೂ ದಿನ ಕಣ್ಣಿಗೆ ಕಾಣುವ ತಾಯಿ-ತಂದೆಯೇ ದೇವರು ಅವರ ಮನಸ್ಸನ್ನು ನೋಯಿಸುವ ಕೆಲಸವನ್ನು ಯಾರು ಮಾಡಬೇಡಿ ಆಗ ಆ ಭಗವಂತನ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ ಯಾವಾಗಲೂ ಸಂಸ್ಕಾರ-ಸಂಸ್ಕೃತಿಯ ಜೊತೆಗೆ ಸಮುದಾಯ ಸಂಘಟನೆಯನ್ನು ಮರೆಯಬೇಡಿ ಎಂದರು.

ಸಂಘದ ಗೌರವಾಧ್ಯಕ್ಷ ಸುರೇಶ ಆರ್. ಕಾಂಚನ್ ಹಾಗೂ ಮುಖ್ಯ ಅತಿಥಿಗಳು ಮತ್ತು ಸಂಘದ ಪದಾಧಿಕಾರಿಗಳು ದೀಪಾ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಲಮಾತೆ ಶ್ರೀ ಮಹಿಷಮರ್ಧಿನಿಗೆ ಪೂಜೆ ಸಲ್ಲಿಸಿದ ಬಳಿಕ ಸಮುದಾಯ ಬಾಂಧವರಿAದ ನೃತ್ಯ ಸಂಭ್ರಮ, ಯಕ್ಷಗಾನ ನಾಟ್ಯ ವೈಭವ ಮತ್ತು ಹಾಸ್ಯ ಪ್ರಹಸನ ಸೇರಿದಂತೆ ಹಲವಾರು ಮನೋರಂಜನಾ ಕಾರ್ಯಕ್ರಮ ಜರಗಿದವು ಮೊಗವೀರ ವಾಗ್ವರ್ದಿನಿ ಸಭಾ ಮತ್ತು ಕಾಂಚನಿ ಕಲಾ ಕೇಂದ್ರ ಇವರಿಂದ ಆಶುಭಾಷಣ ಮತ್ತು ಸಂಗೀತ ಸ್ಪರ್ಧೆ ಆಯೋಜಿಸಲಾಗಿತ್ತು
ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಪ್ರದೀಪ ಚಂದನ್ ಮತ್ತು ಕನ್ನಡ ಭವನ ಹೈಸ್ಕೂಲು ಮತ್ತು ಜ್ಯೂನಿಯರ್ ಕಾಲೇಜು ಪ್ರಾಂಶುಪಾಲೆ ಅಮೃತ ಅಜಯ ಶೆಟ್ಟಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಮಾರ್ಗದರ್ಶನ ಮಾಡಿದರು.

ಯೋಗಪಟು ಸುಮತಿ ರಾಜು ಮೊಗವೀರ, ವಾಗ್ವರ್ಧಿನಿ ಸಭಾ ಮತ್ತು ಕಾಂಚನಿ ಕಲಾ ಕೇಂದ್ರದ ಕಾರ್ಯದರ್ಶಿ ಭಾಸ್ಕರ ಶ್ರೀಯಾನ್, ಸುರೇಶ ತೋಳಾರ್ ಮತ್ತು ನಾಗೇಶ್ ತೋಳಾರ್ ಕುಟುಂಬ, ಪ್ರಾಂಶುಪಾಲೆ ಅಮೃತಾ ಅಜಯ ಶೆಟ್ಟಿಯವರನ್ನು ವೇದಿಕೆಯ ಗಣ್ಯರು ಸತ್ಕರಿಸಿದರು. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಅದೃಷ್ಟ ದಂಪತಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧನಶೀಲರನ್ನು ಗೌರವಿಸಲಾಯಿತು.
ಅಮೃತಾ ಆರ್. ಮೊಗವೀರ, ಸಾನಿಕಾ ಆರ್. ಮೊಗವೀರ, ಪೂಜಾ ಪಿ. ಬಂಗೇರ ಪ್ರಾರ್ಥಿಸಿದರೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಘದ ಅಧ್ಯಕ್ಷ ಸಂತೋಷ ಪುತ್ರನ್ ಪುಷ್ಪಗುಚ್ಛ ನೀಡಿ ಗೌರವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷ ಸಂತೋಷ ಕೆ. ಪುತ್ರನ್, ಗೌರವಾಧ್ಯಕ್ಷ ಸುರೇಶ ಆರ್. ಕಾಂಚನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ ಅಜಿತ್ ಜಿ. ಸುವರ್ಣ, ಅಧ್ಯಕ್ಷ ಗಣೇಶ ಕಾಂಚನ್, ಎಮ್ ವಿ ಎಮ್ ಟ್ರಸ್ಟಿಗಳಾದ ಶಶಿಧರ, ಚಂದ್ರಶೇಖರ್, ಸಂಘದ ಮಾಜಿ ಅಧ್ಯಕ್ಷರುಗಳಾದ ಮಹಾಬಲ ಎಮ್. ಕುಂದರ್, ರಾಜು ಮೆಂಡನ್ ವಂಡ್ಸೆ, ಎನ್. ಎಚ್. ಬಗ್ವಾಡಿ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ ಮೆಂಡನ್, ಉದ್ಯಮಿ ಪ್ರದೀಪ ಚಂದನ್, ಗೌರವ ಕೋಶಾಧಿಕಾರಿ ನಾಗರಾಜ್ ಶ್ರೀಯಾನ್, ಕಾಂಚನಿ ಕಲಾಕೇಂದ್ರದ ಕಾರ್ಯದರ್ಶಿ ಭಾಸ್ಕರ ಶ್ರೀಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ನಾಯ್ಕ, ಗೌರವ ಕಾರ್ಯಾಧ್ಯಕ್ಷೆ ಸುದೀಪಾ ಕುಂದರ್, ಥಾಣೆ ಶಾಖೆಯ ಕಾರ್ಯಾಧ್ಯಕ್ಷ ಅವಿನಾಶ್ ಪುತ್ರನ್, ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷ ರಾಜು ಮೊಗವೀರ ತಗ್ಗರ್ಸೆ ಮತ್ತು ದೇವರಾಜ್ ಕುಂದರ್ ಉಪಸ್ಥಿತರಿದ್ದರು.
ಮಂಜುನಾಥ ನಾಯ್ಕ ಸರ್ವರನ್ನು ಸ್ವಾಗತಿಸಿ ಸಭಾ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರೆ ಮನೋರಂಜನಾ ಕಾರ್ಯಕ್ರಮವನ್ನು ಶ್ಯಾಮಲ ಎಮ್. ಮೊಗವೀರ ನಿರ್ವಹಿಸಿದರು ನಿಶಾ ಮೆಂಡನ್ ಸಹಕರಿಸಿದರು
ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ಆಡಳಿತ ಮಂಡಳಿಯ ಉಪಾಧ್ಯಕ್ಷ ರಮೇಶ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ನಾಯ್ಕ, ಅಶೋಕ ಮೆಂಡನ್, ಜೊತೆ ಕೋಶಾಧಿಕಾರಿ ಪ್ರವೀಣ್ ನಾಯ್ಕ, ಕ್ರೀಡಾ ಕಾರ್ಯದರ್ಶಿ ರಘುರಾಮ್ ಮೆಂಡನ್, ಸುನೀಲ್ ಕುಂದರ್, ಸೇವಾದಳದ ಕ್ಯಾಪ್ಟನ್ ದಿನೇಶ ಮೊಗವೀರ ಸದಸ್ಯರುಗಳಾದ ರಾಜೇಂದ್ರ ಚಂದನ್, ಸುರೇಶ ತೋಳಾರ್, ಮಾಧವ ಸುವರ್ಣ, ಉದಯಕುಮಾರ್ ಪುತ್ರನ್, ಸತೀಶ್ ಶ್ರೀಯಾನ್, ರಾಘವೇಂದ್ರ ಚಂದನ್, ರಾಘವೇಂದ್ರ ಬಗ್ವಾಡಿ, ಉಮೇಶ್ ಮೊಗವೀರ ರಾಜೀವ ನಾಯ್ಕ, ಮಹಿಳಾ ಸಮಿತಿ, ಸೇವಾದಳ ಹಾಗೂ ವಿವಿಧ ಸ್ಥಳೀಯ ಶಾಖೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಶ್ರಮಿಸಿದರು.

ವರದಿ : ಲಕ್ಷ್ಮಣ ಪೂಜಾರಿ ಕೊಡೇರಿ



Related posts

ಬಿಲ್ಲವರ ಅಸೋಸಿಯೇಷನ್‌ನ ಭಾಂಡುಪ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ಜಯಂತಿ ಉತ್ಸವ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತ ಸಮಿತಿಯ ಚುನಾವಣೆ – ಜಯಶಾಲಿಯಾದ “ವಿಶನ್-2030” ಪ್ಯಾನೇಲ್

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವಕ್ಕೆ ಚಾಲನೆ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ : ಗುರುಪೂರ್ಣಿಮೆ ಆಚರಣೆ.

Mumbai News Desk

ಹಟ್ಟಿಯಂಗಡಿ ಮೇಳದ ಮುಂಬಯಿ ಪ್ರವಾಸ: ಗಾಣೇಕರ್ ನಾಟ್ಯಾಲಯದಲ್ಲಿ ಉದ್ಘಾಟನೆ

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ , ಇದರ ಆಟಿಡೋಂಜಿ ದಿನ

Mumbai News Desk