30 C
Mumbai
September 15, 2026
Mumbai News Kannada
ಪ್ರಕಟಣೆ

ಸೆಪ್ಟೆಂಬರ್ 17ರಂದು ಮುಂಬೈನಲ್ಲಿ ಕರ್ನಾಟಕ ವಿಶ್ವಕರ್ಮ ಎಸ್ಸೋಸಿಯೇಷನ್ ವತಿಯಿಂದ ಶ್ರೀ ವಿಶ್ವಕರ್ಮ ಮಹೋತ್ಸವ





ಸೆಪ್ಟೆಂಬರ್ 17ರಂದು ಮುಂಬೈನಲ್ಲಿ ಕರ್ನಾಟಕ ವಿಶ್ವಕರ್ಮ ಎಸ್ಸೋಸಿಯೇಷನ್ ವತಿಯಿಂದ ಶ್ರೀ ವಿಶ್ವಕರ್ಮ ಮಹೋತ್ಸವ

ಮುಂಬೈ: ಕರ್ನಾಟಕ ವಿಶ್ವಕರ್ಮ ಎಸ್ಸೋಸಿಯೇಷನ್ (ರಿ.) ವತಿಯಿಂದ ವರ್ಷಂಪ್ರತಿ ಜರುಗುವ ಶ್ರೀ ವಿಶ್ವಕರ್ಮ ಮಹೋತ್ಸವವು ಇದೇ ಬರುವ ಸೆಪ್ಟೆಂಬರ್ 17, 2026ರ ಗುರುವಾರದಂದು ಮುಂಬೈನ ಮಲಾಡ್ (ಪೂರ್ವ) ಪಠಾಣ್‌ವಾಡಿ/ಮಲ್ಕಾನಿ ಎಸ್ಟೇಟ್‌ನಲ್ಲಿರುವ ದತ್ತಾಮಂದಿರ ರಸ್ತೆ, ಶಾರದಾ ಹೈಸ್ಕೂಲಿನ ಹತ್ತಿರವಿರುವ ಶ್ರೀ ಸ್ವಾಮಿ ನಾರಾಯಣ ಮಂದಿರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಅಂದು ಬೆಳಿಗ್ಗೆ 5.00 ಗಂಟೆಯಿಂದ ರಾತ್ರಿ 7.00 ಗಂಟೆಯವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 5.00ರಿಂದ 6.00ರ ವರೆಗೆ ಶ್ರೀ ವಿಶ್ವಕರ್ಮ ಹೋಮ ಜರುಗಲಿದ್ದು, ಬೆಳಿಗ್ಗೆ 8.00ರಿಂದ ಸಂಜೆ 4.00ರ ವರೆಗೆ ಪ್ರತಿ ಗಂಟೆಗೂ ಪೂಜಾ ಸೇವೆಗಳನ್ನು ಮಾಡಿಸಲಾಗುತ್ತದೆ. ಬೆಳಿಗ್ಗೆ 9.00ರಿಂದ ಮಧ್ಯಾಹ್ನ 2.30ರ ವರೆಗೆ ಭಜನಾ ಮಹೋತ್ಸವ ನಡೆಯಲಿದ್ದು, ಇದರಲ್ಲಿ ಕರ್ನಾಟಕ ವಿಶ್ವಕರ್ಮ ಎಸ್ಸೋಸಿಯೇಷನ್‌ನ ಕಾರ್ಯಕಾರಿ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ, ದೊಂಬಿವಲಿಯ ವಿಶ್ವಕರ್ಮ ಮಹಿಳಾ ಬಳಗ, ಬೋರಿವಲಿಯ ಶ್ರೀ ಲಲಿತಾಂಬಾ ಭಜನಾ ಮಂಡಳಿ ಹಾಗೂ ಶ್ರೀ ವಿಶ್ವಕರ್ಮ ಕಾಳಿಕಾಂಬಾ ಭಜನಾ ವೃಂದದ ಸದಸ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12.30ರಿಂದ 3.00ರ ವರೆಗೆ ಅನ್ನ ಸಂತರ್ಪಣೆ ನೆರವೇರಲಿದೆ. ತದನಂತರ ಮಧ್ಯಾಹ್ನ 3.00ರಿಂದ 4.00ರ ವರೆಗೆ 5ರಿಂದ 15 ವರ್ಷದ ಮಕ್ಕಳಿಂದ ಶಾಸ್ತ್ರೀಯ ನೃತ್ಯ, ಫ್ಯಾನ್ಸಿ ಡ್ರೆಸ್ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 4.00ರಿಂದ 5.00ರ ವರೆಗೆ ಸಭಾ ಕಾರ್ಯಕ್ರಮ, 5.00ರಿಂದ 5.30ರ ವರೆಗೆ ಲಕ್ಕಿ ಡ್ರಾ ಹಾಗೂ ಬಹುಮಾನ ವಿತರಣೆ, ಮತ್ತು ಸಂಜೆ 5.30ರಿಂದ 6.00ರ ವರೆಗೆ ಮಹಾಮಂಗಳಾರತಿ ನಡೆಯಲಿದೆ.

ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹಾಗೂ ಸಮಾಜ ಬಾಂಧವರು ಕುಟುಂಬ ಸಮೇತರಾಗಿ ಭಾಗವಹಿಸಿ, ತೀರ್ಥ-ಪ್ರಸಾದ ಸ್ವೀಕರಿಸಿ ಶ್ರೀ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಸಂಸ್ಥೆಯ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಶೈಕ್ಷಣಿಕ ಹಾಗೂ ಸಮಾಜ ಕಲ್ಯಾಣ ಸಮಿತಿ ಸದಸ್ಯರು ವಿನಂತಿಸಿದ್ದಾರೆ.



Related posts

ಜ 22: ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ* ಶ್ರೀ ರಾಮ*  ಯಕ್ಷಗಾನ

Mumbai News Desk

ಸಾಂತಕ್ರೂಸ್   ಶ್ರೀ ಮಂತ್ರ ದೇವಿ   ದೇವಸ್ಥಾನ ವಾರ್ಷಿಕ ಮಹಾಪೂಜೆ.

Mumbai News Desk

ಡಿ14. ಯುಎಇ ಬಂಟ್ಸ್‌ನ 48ನೇ ವರ್ಷದ “ಭಾವೈಕ್ಯ ಬಂಟರ ಮಹಾಸಮಾಗಮ”

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಯನ್ ಕೋಲಿವಾಡ – ಜೂನ್ 30ರಂದು ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : ಸೆ. 28ರಂದು 80ನೇ ವಾರ್ಷಿಕ ಮಹಾಸಭೆ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ ಡೊಂಬಿವಲಿ ಜ.4 ರಂದು  ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Mumbai News Desk