September 1, 2026
Mumbai News Kannada
ಪ್ರಕಟಣೆ

ಡೊಂಬಿವಲಿಯಲ್ಲಿ ಇಂದು( ಜುಲೈ 15) ಅದ್ದೂರಿ ಬಡಗು ಯಕ್ಷ ಸಂಭ್ರಮ: ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಪ್ರದರ್ಶನ, ಸಾಧಕರಿಗೆ ಸನ್ಮಾನ






​ಡೊಂಬಿವಲಿ: ಇಲ್ಲಿನ ಪ್ರತಿಷ್ಠಿತ ಹೋಟೆಲ್ ಉದ್ಯಮಿ, ಯಕ್ಷಕಲಾ ಸಂಘಟಕ ಹಾಗೂ ಕಲಾಪ್ರೇಮಿ, ಡೊಂಬಿವಲಿಯ ಹೋಟೆಲ್ ಮಾತೋಶ್ರೀಯ ಮಾಲಕರಾದ ಶ್ರೀ ರತ್ನಾಕರ ಹೆಗ್ಡೆ ಯವರ ವ್ಯವಸ್ಥಾಪಕತ್ವ ಹಾಗೂ ಸಂಯೋಜನೆಯಲ್ಲಿ ನಾಳೆ ತಾ. 15-07-2026 ನೇ ಬುಧವಾರ ಸಂಜೆ 4 ಕ್ಕೆ ಡೊಂಬಿವಲಿ (ಪೂರ್ವ)ದ ಮಾತೋಶ್ರೀ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅದ್ದೂರಿ ಬಡಗು ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.


​ನಡೂರು ಮಂದಾರ್ತಿ ಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಎಂಬ ಪುಣ್ಯಕಥಾ ಪ್ರಸಂಗವು ಪ್ರದರ್ಶನಗೊಳ್ಳಲಿದೆ. ಇದೇ ಸುಸಂದರ್ಭದಲ್ಲಿ ಮಹಿಷಾಸುರ ಖ್ಯಾತಿಯ ಜನಪ್ರಿಯ ಯಕ್ಷಗಾನ ಕಲಾವಿದರಾದ ಶ್ರೀ ನಂದೀಶ್ ಕುಮಾರ್ ಜನ್ಸಾಲೆ ಇವರನ್ನು ಅತಿಥಿ ಗಣ್ಯರ ಹಸ್ತದಿಂದ ಸನ್ಮಾನಿಸಿ ಗೌರವಿಸಲಾಗುವುದು.


​ಸನ್ಮಾನ ಸಭಾ ಕಾರ್ಯಕ್ರಮದ ಅತಿಥಿ ಗಣ್ಯರು:

​ಶ್ರೀ ರತ್ನಾಕರ ಹೆಗ್ಡೆ (ಹೋಟೆಲ್ ಮಾತೋಶ್ರೀ, ಡೊಂಬಿವಲಿ)
​ಶ್ರೀ ಸುಕುಮಾರ್ ಶೆಟ್ಟಿ (ಅಧ್ಯಕ್ಷರು, ಕರ್ನಾಟಕ ಸಂಘ, ಡೊಂಬಿವಲಿ)
​ಶ್ರೀ ಅಜಿತ್ ಶೆಟ್ಟಿ (ಅಧ್ಯಕ್ಷರು, ಹೋಟೆಲ್ ಅಸೋಸಿಯೇಷನ್, ಡೊಂಬಿವಲಿ)
​ಶ್ರೀ ಸುಬ್ಬಯ್ಯ ಶೆಟ್ಟಿ (ಹೋಟೆಲ್ ಉದ್ಯಮಿ, ಕಲ್ಯಾಣ್)
​ಶ್ರೀ ಭಾಸ್ಕರ್ ಶೆಟ್ಟಿ (ಗುರುದೇವ್ ಹೋಟೆಲ್, ಕಲ್ಯಾಣ್)
​ಶ್ರೀ ಆರ್ಡಿ ಉದಯ ಶೆಟ್ಟಿ (ಹೋಟೆಲ್ ಉದ್ಯಮಿ, ಉಲ್ಲಾಸನಗರ)
​ಶ್ರೀ ದಿವಾಕರ ಶೆಟ್ಟಿ ಇಂದ್ರಾಳಿ (ಹೋಟೆಲ್ ಐಶ್ವರ್ಯ, ಡೊಂಬಿವಲಿ)
​ಶ್ರೀ ಕಿಶೋರ್ ಶೆಟ್ಟಿ (ಹೋಟೆಲ್ ಪ್ರೆಸ್ಟೀಜ್, ಡೊಂಬಿವಲಿ)
​ಶ್ರೀ ವಿಜಿತ್ ಶೆಟ್ಟಿ (ಹೋಟೆಲ್ ದ್ವಾರಕಾ, ಡೊಂಬಿವಲಿ)
​ಶ್ರೀ ಕರುಣಾಕರ್ ಶೆಟ್ಟಿ (ಹೋಟೆಲ್ ಸುಯೋಗ್, ಡೊಂಬಿವಲಿ)
​ಶ್ರೀ ಆನಂದ ಶೆಟ್ಟಿ (ಅಧ್ಯಕ್ಷರು, ಬಂಟರ ಸಂಘ, ಡೊಂಬಿವಲಿ)
​ಶ್ರೀ ಸತೀಶ್ ಶೆಟ್ಟಿ (ಕೆ. ಎನ್. ಪಾರ್ಕ್, ಉದ್ಯಮಿ, ಕಲ್ಯಾಣ್)
​ಶ್ರೀ ಪ್ರಭಾಕರ್ ಶೆಟ್ಟಿ (ಹೋಟೆಲ್ ಅಂಬಿಕಾ, ಡೊಂಬಿವಲಿ)
​ಶ್ರೀ ತುಕಾರಾಂ ರೈ (ಹೋಟೆಲ್ ರೀಜೆನ್ಸಿ, ಡೊಂಬಿವಲಿ)
​ಶ್ರೀ ಸದಾನಂದ ಶೆಟ್ಟಿ (ಅಧ್ಯಕ್ಷರು, ಅಯ್ಯಪ್ಪ ಮಂದಿರ, ಡೊಂಬಿವಲಿ)
​ಶ್ರೀ ಸುಧೀರ್ ಶೆಟ್ಟಿ (ಹೋಟೆಲ್ ಉದ್ಯಮಿ, ಉಲ್ಲಾಸನಗರ)
​ಶ್ರೀ ಸದಾನಂದ ಶೆಟ್ಟಿ (ಡಾಲ್ಫಿನ್ ಹೋಟೆಲ್, ಉಲ್ಲಾಸನಗರ)
​ಶ್ರೀ ಮೋಹನ್ ಶೆಟ್ಟಿ (ಸಾಯಿದೀಪ್ ಲಾಡ್ಜಿಂಗ್, ಡೊಂಬಿವಲಿ)
​ಶ್ರೀ ಸತೀಶ್ ಶೆಟ್ಟಿ (ಹೋಟೆಲ್ ಇಡೋ, ಡೊಂಬಿವಲಿ)
​ಶ್ರೀ ರಾಜೀವ ಭಂಡಾರಿ (ಹೋಟೆಲ್ ಅನ್ನಪೂರ್ಣ, ಡೊಂಬಿವಲಿ)
​ಶ್ರೀ ವೇಣುಗೋಪಾಲ್ ರೈ (ಹೋಟೆಲ್ ಉದ್ಯಮಿ, ಡೊಂಬಿವಲಿ)
​ಶ್ರೀ ಅರುಣ್ ಶೆಟ್ಟಿ (ಹೋಟೆಲ್ ಕುಶಾಲ, ಡೊಂಬಿವಲಿ)

ಕಾರ್ಯಕ್ರಮದಲ್ಲಿ ನಾಡಿನ ಹಾಗೂ ಸ್ಥಳೀಯ ಉದ್ಯಮ ರಂಗದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.


​ವಿಶೇಷ ಸೂಚನೆ:
ಈ ಯಕ್ಷಗಾನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಹೋಟೆಲ್ ಮಾತೋಶ್ರೀ ಇದರ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದ ವ್ಯವಸ್ಥಾಪಕರಾಗಿದ್ದು, ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ. ಯಕ್ಷಗಾನ ಪ್ರದರ್ಶನದ ಕೊನೆಯಲ್ಲಿ ಸರ್ವರಿಗೂ ಪ್ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಾಹಿತಿ: ಸೀತಾರಾಮ್ ಶೆಟ್ಟಿ ಆರೂರು.



Related posts

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ.): ಸೆ. 28ಕ್ಕೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಯಕ್ಷಗಾನ.

Mumbai News Desk

ಮೊಗವೀರ ಮಹಾಜನ ಸೇವಾ ಬಗ್ವಾಡಿ ಹೋಬಳಿ , ಮುಂಬೈ : ಆ.22ರಂದು ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ವೈಭವ

Mumbai News Desk

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್ ಪಶ್ಚಿಮ ಡಿ 17: 28ನೇ ವರ್ಷದ ಅಯ್ಯಪ್ಪ ಮಹಾಪೂಜೆ

Mumbai News Desk

ಮಲಾಡ್  ಪೂರ್ವ   ಶ್ರೀ ಮೂಕಾಂಬಿಕ ಮಂದಿರ : ಜೂ 9 ರಂದು   ಪ್ರತಿಷ್ಠಾ ಮಹೋತ್ಸವ.

Mumbai News Desk

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ

Mumbai News Desk

ನವೆಂಬರ್ 24. ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ : 36ನೇ ವಾರ್ಷಿಕ ಮಹಾಪೂಜೆ ಮತ್ತು ಭಜನಾ ಮಂಗಳೋತ್ಸವ

Mumbai News Desk