September 15, 2026
Mumbai News Kannada
ತುಳುನಾಡು

ತೊಕ್ಕೊಟ್ಟಿನಲ್ಲಿ ಶ್ರೀ ಸಾಯಿ ಪರಿವಾರ್ ಟ್ರಸ್ಟ್‌ನಿಂದ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ: ಯಕ್ಷಗಾನ ಕಲಾವಿದ ಅಶ್ವಥ್ ಮಂಜನಾಡಿ ಅವರಿಗೆ ಸನ್ಮಾನ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣೆ





ತೊಕ್ಕೊಟ್ಟಿನ ಭಾಗದಲ್ಲಿ ಅಶಕ್ತ ಜನರಿಗೆ ಆಸರೆಯಾಗಿ ನಿಂತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ.) ತೊಕ್ಕೊಟ್ಟು ಇದರ ಆಶ್ರಯದಲ್ಲಿ ‘ಹೊಂಬೆಳಕು’ ಸಭಾಂಗಣದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡು, ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡುತ್ತಿರುವ ಅಪ್ರತಿಮ ಕಲಾವಿದ ಶ್ರೀ ಅಶ್ವಥ್ ಮಂಜನಾಡಿ ಅವರಿಗೆ ಪ್ರೀತ್ಯಾದರದ ಸನ್ಮಾನ ಹಾಗೂ ಗೌರವ ಸಮರ್ಪಣೆ ಮಾಡಲಾಯಿತು.


ಅಂತೆಯೇ, ಅಚ್ಚತುಳುವಿನಲ್ಲಿ ‘ತುಳುವ ಬೊಳ್ಳಿ’ ಎಂದೇ ಹೆಸರುವಾಸಿಯಾದ, ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಮಾನ್ಯ ದಯಾನಂದ ಕತ್ತಲ್‌ಸಾರ್ ಅವರು ಗುರುಪೂರ್ಣಿಮೆ ಕುರಿತು ಅರ್ಥಪೂರ್ಣ ವಿಚಾರಗಳನ್ನು ಹಂಚಿಕೊಂಡರು. ಇದೇ ವೇಳೆ ಅತ್ಯಂತ ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಸಾಯಿ ಪರಿವಾರ್‌ ಟ್ರಸ್ಟ್‌ನ ಗೌರವಾನ್ವಿತ ಸದಸ್ಯರಾದ ಶ್ರೀ ಸುರೇಶ್ ಭಟ್ನಗರ್ ಅವರು ಶ್ರೀ ಸಾಯಿ ಪರಿವಾರ್ ಸಂಸ್ಥೆಯ ನೂತನ ವೆಬ್‌ಸೈಟ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ವಿಶೇಷ ಸಭೆಯಲ್ಲಿ ಟ್ರಸ್ಟ್‌ನ ವಿಶ್ವಸ್ತರು ಹಾಗೂ ಗೌರವ ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದ ಸಂಪೂರ್ಣ ವ್ಯವಸ್ಥೆ ಮತ್ತು ಸುಂದರ ನಿರೂಪಣೆಯನ್ನು ಪ್ರವೀಣ್ ಎಸ್. ಕುಂಪಲ ಅವರು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.



Related posts

ಮೂಲ್ಕಿ : ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಬಪ್ಪನಾಡು ದೇವಸ್ಥಾನದಲ್ಲಿ ದೇವಕಾರ್ಯ ಮಾಡುವ ಶ್ರೀ ನಾರಾಯಣ ಭಟ್ ಎನ್. ಪಿಯವರಿಗೆ ಸನ್ಮಾನ

Mumbai News Desk

ಮೂಲ್ಕಿ: ಪೂಂಜಾ ಚಾರಿಟೇಬಲ್ ಟ್ರಸ್ಟ್‌ನಿಂದ ಅಸಹಾಯಕರಿಗೆ ಚಿಕಿತ್ಸೆಗೆ ನೆರವು

Mumbai News Desk

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನ – ವಾರ್ಷಿಕ ಬಂಡಿ ನೇಮೋತ್ಸವ ಸಂಪನ್ನ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಮೂಲ್ಕಿ : ಆಗಸ್ಟ್ 17ರಂದು ಮೂಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆ

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಖ್ಯಾತ ಹಿನ್ನೆಲೆ ಗಾಯಕ ಕುನಲ್ ಗಾಂಜಾವಾಲ ಭೇಟಿ

Mumbai News Desk

ಮೂಲತ್ವ ಫೌಂಡೇಶನ್‌ನಿಂದ ‘ಆಟಿದೊಂಜಿ ದಿನ’ ಆಚರಣೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ, ‘ಮೂಲತ್ವ ಲೋಕ ಪೊರ್ಲು’ ಅನಾವರಣ

Mumbai News Desk