27.7 C
Mumbai
August 11, 2026
Mumbai News Kannada
ಸುದ್ದಿ

ರಾಷ್ಟ್ರೀಯ ಮಹಾಮಾರ್ಗಗಳ ಪಕ್ಕದಲ್ಲಿರುವ ಅನಧಿಕೃತ ಧಾಬಾ, ಹೋಟೆಲ್‌ ತೆರವಿಗೆ ಮಹಾರಾಷ್ಟ್ರ ಸರ್ಕಾರ ಆದೇಶ





ರಾಷ್ಟ್ರೀಯ ಮಹಾಮಾರ್ಗಗಳ ‘ರಸ್ತೆಯ ಹಕ್ಕು’ (ರೈಟ್ ಆಫ್ ವೇ – ROW) ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅನಧಿಕೃತ ಮತ್ತು ಪರವಾನಗಿ ಇಲ್ಲದ ಧಾಬಾ, ಹೋಟೆಲ್ ಹಾಗೂ ವಾಣಿಜ್ಯ ನಿರ್ಮಾಣಗಳನ್ನು ಮುಂಬರುವ ,60 ದಿನಗಳ ಒಳಗೆ ತೆರವುಗೊಳಿಸಿ, ನೆಲಸಮ ಮಾಡುವಂತೆ ಮಹಾರಾಷ್ಟ್ರ ಸರ್ಕಾರ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ರಾಷ್ಟ್ರೀಯ ಮಹಾಮಾರ್ಗಗಳ ಕಾಯ್ದಿರಿಸಿದ ಜಾಗದಲ್ಲಿ ಹೊಸದಾಗಿ ಯಾವುದೇ ಧಾಬಾ ಅಥವಾ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ರಾಜಸ್ಥಾನದ ಫಲೌದಿ ಎಂಬಲ್ಲಿ ರಸ್ತೆಬದಿಯ ಧಾಬಾ ಮುಂದೆ ನಿಲ್ಲಿಸಲಾಗಿದ್ದ ಟ್ರಕ್‌ಗೆ ವಾಹನವೊಂದು ಡಿಕ್ಕಿಯಾಗಿ 15 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈ ಮಹತ್ವದ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಮಹಾಮಾರ್ಗದ ಸುರಕ್ಷಿತ ವಲಯಗಳಲ್ಲಿ NHAI ಅಥವಾ PWD ಅನುಮತಿ ಇಲ್ಲದೆ ಯಾವುದೇ ಹೊಸ ವ್ಯಾಪಾರ ಪರವಾನಗಿ ಅಥವಾ ನಿರಾಕ್ಷೇಪಣಾ ಪತ್ರ (NOC) ನೀಡಬಾರದು ಹಾಗೂ ಈಗಾಗಲೇ ನೀಡಲಾಗಿರುವ ಪರವಾನಗಿಗಳನ್ನು ೩೦ ದಿನಗಳಲ್ಲಿ ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ. ಜೊತೆಗೆ, ಮಹಾಮಾರ್ಗದ ಮಧ್ಯಭಾಗದಿಂದ ವಸತಿ ಉದ್ದೇಶಕ್ಕೆ 40 ಮೀಟರ್ ಮತ್ತು ವಾಣಿಜ್ಯ ಉದ್ದೇಶಕ್ಕೆ 72 ಮೀಟರ್ ವ್ಯಾಪ್ತಿಯಲ್ಲಿ ಭೂ ಬಳಕೆಯ ಬದಲಾವಣೆಯನ್ನು ನಿಷೇಧಿಸಲು ನಿರ್ದೇಶಿಸಲಾಗಿದೆ. ಈ ಕಾನೂನು ಜಾರಿಗಾಗಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ‘ಜಿಲ್ಲಾ ಮಹಾಮಾರ್ಗ ಸುರಕ್ಷತಾ ಪಡೆ’ ರಚಿಸಲಾಗುತ್ತಿದ್ದು, ಅತಿಕ್ರಮಣ ತೆರವುಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ವಹಿಸಲಾಗಿದೆ.



Related posts

ಕಲ್ಯಾಣ್: ಧಾರ್ಮಿಕ, ಸಾಮಾಜಿಕ ಸಂಘಟಕ, ಭಜನಾ ಗಾಯಕ ದೇವಾನಂದ್ ಜೆ ಸುವರ್ಣ ನಿಧನ

Mumbai News Desk

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಉಡುಪಿ: ಕರ್ನಾಟಕದ ಮೊಟ್ಟಮೊದಲ ‘ಸಂಪೂರ್ಣ ಸಾಕ್ಷರ’ ಜಿಲ್ಲೆಯಾಗಿ ಉಡುಪಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಹಾಯಧನ ವಿತರಣೆ

Mumbai News Desk

ಉಡುಪಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ  ಸಮಾಲೋಚನಾ ಸಭೆ.

Mumbai News Desk

ಸಾಣೂರು : ಮುಟ್ಟಿ ಸಿ.ಕುಕ್ಯಾನ್ ನಿಧನ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭಾಭವನ ನಿರ್ಮಾಣಕ್ಕೆ ಸಹಕಾರ ರತ್ನ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಸಹಕಾರ

Mumbai News Desk