30 C
Mumbai
September 26, 2026
Mumbai News Kannada
ನಿಧನ ಸುದ್ದಿ

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ



ಹೆಜಮಾಡಿ: ಹೆಜಮಾಡಿ ಮಟ್ಟುಪಟ್ನ ನಿವಾಸಿ ಉದಯ ಕುಮಾರ್ (60) ಅವರು ಆಗಸ್ಟ್ 12ರಂದು ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಹೆಜಮಾಡಿಯ ಜೈ ಕರ್ನಾಟಕ ಸಂಸ್ಥೆಯನ್ನು 1987ರಲ್ಲಿ ಸ್ಥಾಪಿಸಿದವರಲ್ಲಿ ಒಬ್ಬರಾಗಿದ್ದ ಅವರು, ಸಂಸ್ಥೆಯ ಸಂಚಾಲಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಾಟಕ ಕ್ಷೇತ್ರದಲ್ಲಿ ಹಾಸ್ಯ ನಟರಾಗಿ ಹಾಗೂ ಯುವಜನ ಮೇಳಗಳಲ್ಲಿ ಜಾನಪದ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅವರು, ತಮ್ಮ ಕಲಾ ಸೇವೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

ಮಟ್ಟುಪಟ್ನ ಮೊಗವೀರ ಮಹಾಸಭಾದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಉದಯ ಕುಮಾರ್ ಅವರು, ಕೊಂಕಣ ರೈಲ್ವೆಯಲ್ಲಿ ಉದ್ಯೋಗಿಯಾಗಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಅವರ ನಿಧನಕ್ಕೆ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಜೈ ಕರ್ನಾಟಕ ಸಂಸ್ಥೆಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.



Related posts

ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) ನಿಧನ

Mumbai News Desk

ರಂಗಕರ್ಮಿ, ಸಾಹಿತಿ ಪರಮಾನಂದ ವಿ. ಸಾಲ್ಯಾನ್ ಇನ್ನಿಲ್ಲ: ಸಸಿಹಿತ್ಲುವಿನಲ್ಲಿ ಇಂದು ಅಂತಿಮ ದರ್ಶನ

Mumbai News Desk

ಜೋಗೇಶ್ವರಿ: ಹೋಟೆಲ್ ಉದ್ಯಮಿ, ಸಂಘಟಕ ನಾರಾಯಣ ಪೂಜಾರಿ ನಿಧನ

Mumbai News Desk

ಮೀರಾರೋಡ್: ಖ್ಯಾತ ದಂತವೈದ್ಯ ಡಾ. ಅವಿನಾಶ್ ಶೆಟ್ಟಿ ನಿಧನ

Mumbai News Desk

ಸಂಗೀತ ಲೋಕದ ಮಹಾತಾರೆ ಅಸ್ತಂಗತ; ‘ಗಾನಕೋಗಿಲೆ’ ಎಸ್. ಜಾನಕಿ ಇನ್ನಿಲ್ಲ

Mumbai News Desk

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ

Mumbai News Desk