September 13, 2026
Mumbai News Kannada
ಮುಂಬಯಿ

ನೆರೂಲ್ ಶ್ರೀ ಬಾಲಾಜಿ ಮಂದಿರದಲ್ಲಿ ಗೋಪಾಲ್ ವೈ ಶೆಟ್ಟಿ ಆಯೋಜನೆಯಲ್ಲಿ ಗುರುವಂದನೆ






ಕೃಷ್ಣನ ವಿವಿಧ ಲೀಲೆಗಳು ನಮಗೆ ಸದಾ ಪ್ರೇರಣೆ: ಸುಗುಣೇಂದ್ರತೀರ್ಥ ಶ್ರೀಗಳು.

ನವಿಮುಂಬಯಿ, ಸೆ. : ದೇವರನ್ನು ನಾವು ಸಂಪೂರ್ಣವಾಗಿ ಅರ್ಪಣಾ ಭಾವ ದಿಂದ ಆರಾಧಿಸಿದಾಗ ದೇವರು ಸದಾ ನಮ್ಮೊಂದಿಗಿರುತ್ತಾರೆ. ಕಷ್ಟ ಬಂದಾಗ ಮಾತ್ರ ದೇವರನ್ನು ನೆನಪಿಸುವುದಲ್ಲ. ಪ್ರತಿದಿನವೂ ದೇವರ ಆರಾಧನೆ ನಮ್ಮಿಂ ದಾಗಬೇಕು. ನಿತ್ಯ ಭಜನೆಯು ಮೂಲಕ ದೇವರನ್ನು ಆರಾಧಿಸಬೇಕು. ಪರಮಾ ತನು ವಿವಿಧ ಅವತಾರಗಳ ಮೂಲಕ ಸಮಸ್ತಬ್ರಹ್ಮಾಂಡದರಕ್ಷಣೆಯನ್ನುಮಾಡು ತ್ತಿದ್ದಾರೆ. ಅದರಲ್ಲಿ ರಾಮ ಮತ್ತು ಕೃಷ್ಣನ ಅವತಾರವು ವು ಮಾನವಕಲ್ಯಾಣಕ್ಕಾಗಿ ಅವತ ರಿಸಿದ್ದು, ನಾವು ಹೇಗೆ ಜೀವ ನವನ್ನು ನಡೆಸಬೇಕು, ಜೀವನದ ಸಮಸ್ಯೆ ಗಳನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ತಿಳಿಸುತ್ತದೆ. ಶ್ರೀ ಕೃಷ್ಣನ ವಿವಿಧ ಲೀಲೆಗಳು ನಮಗೆ ಸದಾ ಪ್ರೇರಣೆಯಾಗಿದೆ ಎಂದು ಉಡುಪಿಯ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ
ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯ ವರು ನುಡಿದರು. ಅವರು ಸೆ. 6ರಂದು ನೆರೂಲ್ ಪಶ್ಚಿಮದ ಸೆಕ್ಟರ್22ರಲ್ಲಿರುವ ಶ್ರೀ ಬಾಲಾಜಿ ಮಂದಿರದ ನೂತನ ಸಭಾ ಭವನದಲ್ಲಿಜರಗಿದಶ್ರೀಗಳಗುರುವಂದನ ಕಾರ್ಯಕ್ರಮದಲ್ಲಿಗುರುವಂದನೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮನಃಶಾಂತಿ ಲಭಿಸುತ್ತದೆ. ಆದ್ದರಿಂದ ಅಂತಹ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆಯನ್ನು ಪಾಲ್ಗೊಳ್ಳುವಂತೆ
ಮಾಡಬೇಕು ಎಂದರು.

ಕಾರ್ಯಕ್ರಮದ ಸಂಯೋಜಕರಾದ ಬಾಲಾಜಿ ಮಂದಿರ ಶ್ರೀ ಲಕ್ಷ್ಮೀ ನರಸಿಂಹ ಸಭಾದ ಕಾರ್ಯಾ ಧ್ಯಕ್ಷ ಗೋಪಾಲ್ ವೈ. ಶೆಟ್ಟಿಯವರು ಅತಿಥಿ-ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನವಿ ಮುಂಬಯಿ ಮಹಾನಗರ ಪಾಲಿಕೆಯ ಮೇಯರ್ ಸುಜಾತಾ ಸೂರಜ್ ಪಾಟೀಲ್ ಅವರನ್ನು ಗೋಪಾಲ್ ವೈ. ಶೆಟ್ಟಿ ಹಾಗೂ ಲತಾ ಗೋಪಾಲ್ ಶೆಟ್ಟಿದಂಪತಿಸಮ್ಮಾನಿಸಿದರು. ಉಪ ಮೇಯರ್‌ದಶರಥ್ ಸೀತಾ
ರಾಮ್ ಭಾಗವತ್ ಹಾಗೂ ನವಿ ಮುಂಬಯಿ ನಗರಪಾಲಿಕೆಯ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷೆ ಜಯಾ ಕೆ. ನಾಥ ಅವರು ಉಪಸ್ಥಿತರಿದ್ದರು. ಬಾಲಾಜಿ ಮಂದಿರದ ವಿಶ್ವಸ್ಥರು ಶ್ರೀಗಳ ಗುರುವಂದನೆಯನ್ನು ನೆರವೇರಿಸಿದರು.

ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ ಸಮಿತಿಯ ಸದಸ್ಯರಾದ ಸಿಎ ಸುಧೀರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಗಳ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಕುಮಾರಿ ನಿವೇದಿತ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಶ್ರೀಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪೂರ್ತಿ ಕಾರ್ಯಕ್ರಮವನ್ನು ನಿವೇದಿತಾ ಶೆಟ್ಟಿ ಅವರು ನಿರೂಪಿಸಿದರು. ಧಾರ್ಮಿಕ ಕಾರ್ಯ ಕ್ರಮದ ಅಂಗವಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ನೆರೂಲ್ ಶ್ರೀ ಅಯ್ಯಪ್ಪ ದುರ್ಗಾದೇವಿ ದೇವಸ್ಥಾನದ ಭಜನ ಮಂಡಳಿಯ ವತಿಯಿಂದ ದೇವಸ್ಥಾನದ ಗೌರವ ಕಾರ್ಯದರ್ಶಿ ಮೋಹನದಾಸ್ ರೈ ಅವರ ನೇತೃತ್ವದಲ್ಲಿ ಭಜನ ಕಾರ್ಯಕ್ರಮ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸಹನಾ ಭಾರದ್ವಾಜ್ ಹಾಗೂ ಪೂಜಾ ವಿಶ್ಲೇಶ್ ಕುಮಾರ್‌ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು. ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು, ವಿವಿಧಸಂಘ-ಸಂಸ್ಥೆಗಳಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.



Related posts

ಕಲಾ ಜಗತ್ತು ವಸುಂಧರ ವತಿಯಿಂದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಪ್ರದಾನ ಸಮಾರಂಭ

Mumbai News Desk

ಗೋರೆಗಾಂವ್ ಪೂರ್ವ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ, 

Mumbai News Desk

ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿನ ಮೇಲೆ ನಿರ್ಬಂಧ ಹೇರಿದ ಆರ್ ಬಿ ಐ – ಆತಂಕದಲ್ಲಿ ಗ್ರಾಹಕರು

Mumbai News Desk

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಜರಗಿದ ಮಹಿಳಾ ದಿನಾಚರಣೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk