
ಮುಂಬಯಿ ಜೂ 5. ಮುಂಬೈಯ ಕುಲಾಲ ಸಮಾಜದ ಮಹಾದಾನಿ. ಆಶಕ್ತರ ಕಣ್ಣೀರು ಒರೆಸುವ ಕರುಣಾಳು ಸುನಿಲ್ ರಾಜು ಸಾಲಿಯಾನ್ ಅವರು ತಮ್ಮ ಮಾತೃಶ್ರೀ ಸಮಾಜ ಸೇವಕಿ ದಿ. ಸುಮಿತ್ರಾ ರಾಜು ಸಾಲ್ಯಾನ್ ಅವರ ಜನ್ಮದಿನ ಜೂನ್ 4ರಂದು ಮುಂಬೈಯ ಗೋರೆ ಗಾಂವ್ ಪೂರ್ವದ ಸಾಯಿಬಾಬಾ ನಗರದ ಸೇಂಟ್ಸ್ ಜೋಸೆಫ್ ಕಾನ್ವೆಂಟ್ ಮತ್ತು ಅಸ್ಸಿಸ್ಸಿ ವೃದ್ಧಾಶ್ರಮದಲ್ಲಿ ಸುಮಾರು 50ಕ್ಕೂಮ್ಮಿಕ್ಕಿ ವೃದ್ಧ ಮಹಿಳೆಯವರು ಉಪಸ್ಥಿತಿಯಲ್ಲಿ ಸುಮಿತ್ರಾ ಸಾಲ್ಯಾನ್ ಅವರು ನೆನಪಿಗಾಗಿ ಕೇಕ್ ಅನ್ನು ಕತ್ತರಿಸಿ ಮಧ್ಯಾಹ್ನದ ಪ್ರೀತಿ ಭೋಜನವನ್ನು ನೀಡಿ ಸಂಭ್ರಮವನ್ನು ಆಚರಿಸಿಕೊಂಡರು .

ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಸಾಲಿಯಾನ್. ನವರು ತಾಯಿ ಪ್ರತಿಯೊಬ್ಬನ ಬದುಕಿನಲ್ಲೂ ಶ್ರೇಷ್ಠತೆಯನ್ನು ಪಡೆದವಳು, ಅವಳ ಋಣಸಂದಾಯ ನಮ್ಮ ಜನುಮದಲ್ಲಿ ಸಾಧ್ಯವಿಲ್ಲ ಆದರೆ ಅವರ ನೆನಪುಗಳು ನಮ್ಮಿಂದ ಸದಾ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷ ನನ್ನ ಅಮ್ಮ ನಮ್ಮನ್ನು ಅಗಲಿದರು ಅವರು ಜನುಮದಿನದ ನೆನಪುಗಳು ಸಾಧ್ಯವಾದಷ್ಟು ನಡೆಸುತ್ತಾ ಬಂದಿದ್ದೇನೆ. ಅಮ್ಮನ ಸಮಾನ ಮನಸ್ಸಿನ ಹಿರಿಯರೊಂದಿಗೆ ಜನ್ಮದಿನವನ್ನು ಆಚರಿಸುವುದು ನನಗೆ ಸಂತೋಷವನ್ನು ನೀಡಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸುನಿಲ್ ಸಾಲಿಯಾನ್ ಮತ್ತು ಅವರ ಧರ್ಮಪತ್ನಿ ದೇವಕಿ ಸಾಲ್ಯಾನ್ ಹಾಗೂ ಕುಲಾಲ ಸಮಾಜದ ಬಂಧುಗಳು.ಹಾಗೂ ಮುಂಬಯಿ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್. ಮಾಜಿ ಅಧ್ಯಕ್ಷರು ಗಿರೀಶ್ ಬಿ. ಸಾಲ್ಯಾನ್ . ಗೌರವ ಕೋಶಧಿಕಾರಿ ಜಯ ಅಂಚನ್. ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಉಮೇಶ್ ಬಂಗೇರ. ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಮಾಲತಿ ಜೆ. ಅಂಚನ್. ಮತ್ತು ಮಮತಾ ಗಿರೀಶ್ ಸಾಲಿಯಾನ.
ಸಂಘದ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕಾರ್ಯ ಧ್ಯಕ್ಷ ಆನಂದ ಕುಲಾಲ್. ಉಪ ಕಾರ್ಯಧ್ಯಕ್ಷ ಅರುಣ್ ಬಂಗೇರ. ಕಾರ್ಯದರ್ಶಿ ಸತೀಶ್ ಬಂಗೇರ . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಮೂಲ್ಯ.
ಕಾರ್ಯದರ್ಶಿ ಆರತಿ ಸಾಲಿಯಾನ್. ಜೊತೆ ಕಾರ್ಯದರ್ಶಿ ಪ್ರಮೀಳಾ ಬಂಗೇರ ಮತ್ತಿತರ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು




