August 10, 2026
Mumbai News Kannada
ಮುಂಬಯಿ

ಶ್ರೀ ರಜಕ ಸಂಘ ಮುಂಬಯಿ : ವಸಾಯಿ ಘಟಕದ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮ ವೈಭವದಿಂದ ಸಂಪನ್ನ





ಶ್ರೀ ರಜಕ ಸಂಘ ಮುಂಬೈ (ನೋಂದಾಯಿತ), ವಸಾಯಿ ವಲಯದ ಮಹಿಳಾ ವಿಭಾಗ ವತಿಯಿಂದ ಆಯೋಜಿಸಲಾಗಿದ್ದ “ಆಟಿಡೊಂಜಿ ದಿನ” ಕಾರ್ಯಕ್ರಮವು ತಾರೀಕು 08.08.2026 ಶನಿವಾರದಂದು ಸಂಜೆ 5.30 ರಿಂದ ಸಂಘದ ಕಚೇರಿಯಲ್ಲಿ ಎಲ್ಲಾ ಸದಸ್ಯರ ಸಂಪೂರ್ಣ ಸಹಕಾರ, ಸಕ್ರಿಯ ಭಾಗವಹಿಸುವಿಕೆ ಹಾಗೂ ಒಗ್ಗಟ್ಟಿನ ಪ್ರಯತ್ನದಿಂದ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ತುಳುನಾಡಿನ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಹಾಗೂ ನಮ್ಮ ಪೂರ್ವಜರ ಜೀವನ ಪದ್ಧತಿಯನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಎಲ್ಲರಲ್ಲೂ ಸಂತೋಷ ಮತ್ತು ಸಂಭ್ರಮವನ್ನು ಮೂಡಿಸಿತು.

ಕಾರ್ಯಕ್ರಮದ ಪ್ರಥಮವಾಗಿ,ದೇವರ ಪೂಜೆ ,ಹಾಗೂ ಪ್ರಾರ್ಥನೆ,ಭಜನೆ ನಡೆಯಿತು…
ಅನಂತರ, ಮಹಿಳಾ ವಿಭಾಗದ ಅಧ್ಯಕ್ಷೆ, *ಶ್ರೀಮತಿ ಚಂದ್ರಾವತಿ ಕುಂದರ್ ,ಹಾಗೂ ಇತರ ಮಹಿಳಾ ಸದಸ್ಯರು, ಬಂದ ಎಲ್ಲಾ ರಜಕ ಬಾಂಧವರನ್ನು ಸ್ವಾಗತಿಸಿ, ಹಿರಿಯ ಸದಸ್ಯರನ್ನು ಸತ್ಕರಿಸಿ, ಬೆಲ್ಲ, ನೀರು, ಪಾನಕ ಸೇವನೆ ನೀಡಿ, ಎಲ್ಲಾ ಸದಸ್ಯನ್ನು ಸಂಪ್ರದಯಕವಾಗಿ, ಸುಗಾಮನ ಬಯಸಿದರು .

ಅನಂತರ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ, ವಸಂತ್ ಬುನ್ನಾನ್ ಆಟಿಯ ಮಹತ್ವದ ಪಾತ್ರವನ್ನು ವಿವರಿಸುತ್ತಾ, ಆಟಿ ತಿಂಗಳು ಬಡತನದ ಕಷ್ಟ ದಿನವಾಗಿದ್ದು, ಆ ತುಳುನಾಡಿನ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕು , ಅದರ ಮಹತ್ವವನ್ನು ತಿಳಿಸುವ ಜವಾಬ್ಧಾರಿಯನ್ನು, ಮನೆಯಲ್ಲಿ ತಂದೆ ತಾಯಿಂದಿರ ಹೊಣೆ, ಎಂದು ಒತ್ತಿ ಹೇಳಿದರು…
ಇನ್ನೋರ್ವ ಶ್ರೀ ರಜಕ ಸಂಘದ ಮುಂಬಯಿ ಇದರ ಕಾರ್ಯಕಾರಿ ಸಮಿತಿ ವಿಭಾಗದ ಮಾಜಿ ಸಕ್ರಿಯ ಕಾರ್ಯದರ್ಶಿರಾದ ಶ್ರೀಮತಿ ಸುಮಿತ್ರಾ ಪಲಿಮಾರು ಮಾತನಾಡುತ್ತಾ, ಆಟಿ ತಿಂಗಳು ತುಂಬ ಕಷ್ಟದ ದಿನಗಳಾಗಿತ್ತು, ಸಂಘ ಸಂಸ್ಥೆ ಗಳಲ್ಲಿ ಆಟಿ ಕೂಟ ಆಚರಿಸುವುದರಿಂದ, ಯುವ ಜನತೆಗೆ ಕರಾವಳಿಯ ತಿಂಡಿತಿನಿಸುಗಳನ್ನು ಹೆಚ್ಚಾಗಿ ಸವಿಯುವ , ಅಭ್ಯಾಸ ಮಾಡಿ ರೂಢಿ ಮಾಡಿ ದಂತಹಾಗುತ್ತದೆ, ಇಂದು ಹೆಚ್ಚಿನ ಮಕ್ಕಳು, ಪೀಝಾ, ಭರ್ಘರ್, ನೂಡಲ್ಸ್ ಮುಂತಾದ ವಿದೇಶಿ ಆಹಾರ ಸೇವನೆಗೆ ಆಕರ್ಷಿತ ರಾಗಿ, ತಮ್ಮ ಆರೋಗ್ಯ ಕೆಡಿಸುವ ಸಮಯ ಬಂದಿದೆ. ಅದನ್ನು ಕಡಿಮೆ ಮಾಡುವ ಹೊಣೆ ಅವರ ತಂದೆ ತಾಯಿಗಳು ಮಾಡಬೇಕು… ಅದೂ ಅಲ್ಲದೆ .ಆಟಿ ತಿಂಗಳು ಒಬ್ಬರನ್ನೊಭರನ್ನು ಸಂಬಂಧವನ್ನು ಜೋಡಿಸುವ, ಸೌಹಾರ್ಧ ಭಾಂದವ್ಯತ್ವವನ್ನು,ಕೂಡಿಸುವ ಭಾಗ್ಯದಾಯಕ, ತಿಂಗಳು ಹೌದು ಎಂದು ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ..

ಮನೋರಂಜನೆ ಕಾರ್ಯಕ್ರಮ, ಅಂಗವಾಗಿ, ತುಳು – ಕನ್ನಡ ಸಿನಿಮಾದ ಗಾನ ವನ್ನು ಶೇಖರ್ ಸಾಲ್ಯಾನ್ , ವಸಂತ್ ಬುನ್ನಾನ್ ತುಂಬ ಮನೋರಂಜನೆಯಾಗಿ ಹಾಡಿ ರಂಜಿಸಿದರು.
ಮತ್ತೊಬ್ಬ ಹಿರಿಯ ಸದಸ್ಯ ಪಾಂಡು ಮಡಿವಾಳ , ರಸ ಪ್ರಶ್ನೆ ಕಾರ್ಯಕ್ರಮವನ್ನು ನೆರವೇರಿಸಿ ಎಲ್ಲರ ಜ್ಞಾನ ಭಂಡಾರವನ್ನು ಹೆಚ್ಚಿಸಿ,ಆಟಿ ದಿನದ ರಸ ಪ್ರಶ್ನೆ ಉತ್ತರ ಕಾರ್ಯಕ್ರಮವನ್ನು ನಿರೂಪಿಸಿದರು.

ಅನಂತರ ಸಂಘದ ವಲಯದ ಸದಸ್ಯ ಮಹಿಳೆಯರೇ ತಮ್ಮ ಮನೆಯಲ್ಲಿ ತಯಾರಿ ಮಾಡಿದ್ದ, ವಿವಿಧ , ತಿನಿಸು, ಖಾದ್ಯ ಗಳನ್ನೂ ಸಿದ್ಧ ಪಡಿಸಿ, ನೆರೆದವರಿಗೆ ರಸ ದೌತನದೊಂದಿಗೆ ತಮ್ಮ ಕೈಯಿಂದ ಉಣಬಡಿಸಿದರು….

ಕಾರ್ಯಕ್ರಮದ ಯಶಸ್ಸಿನಲ್ಲಿ ಮಹಿಳಾ ಘಟಕದ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಮಹಿಳಾ ಘಟಕದ ಸದಸ್ಯರು ಶ್ರೀಮತಿ ಚಂದ್ರಕಲಾ ಕುಂದರ್ ಅವರ ನೇತೃತ್ವದಲ್ಲಿ ಅತ್ಯಂತ ಆಸಕ್ತಿ, ಉತ್ಸಾಹ ಹಾಗೂ ಸಮರ್ಪಣಾ ಮನೋಭಾವದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರತಿಯೊಬ್ಬ ಮಹಿಳಾ ಸದಸ್ಯೆಯೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದರು.
ವಿಶೇಷವಾಗಿ, ಮಹಿಳಾ ಸದಸ್ಯರು ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿದ ವಿವಿಧ ಬಗೆಯ ರುಚಿಕರವಾದ ಸ್ವಾದಿಷ್ಟ ತಿಂಡಿ-ತಿನಿಸುಗಳು ಮತ್ತು ಆಹಾರ ಪದಾರ್ಥಗಳನ್ನು ಕಾರ್ಯಕ್ರಮಕ್ಕೆ ತಂದಿದ್ದರು. ಅವುಗಳ ರುಚಿ ಮತ್ತು ವೈವಿಧ್ಯತೆ ಎಲ್ಲರ ಮನಸೂರೆಗೊಂಡಿತು. ಮನೆಯ ಅಡುಗೆಯ ಸೊಗಡು, ತುಳುನಾಡಿನ ಪರಂಪರೆಯ ಸುವಾಸನೆ ಹಾಗೂ ಆತ್ಮೀಯತೆಯನ್ನು ಈ ಆಹಾರ ಪದಾರ್ಥಗಳು ಕಾರ್ಯಕ್ರಮಕ್ಕೆ ತಂದವು. ಎಲ್ಲರೂ ಅವುಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವು ಅಧ್ಯಕ್ಷರಾದ ಶ್ರೀ ರಮೇಶ್ ಕುಂದರ್ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆಯಿತು. ಉಪಾಧ್ಯಕ್ಷರಾದ ಶ್ರೀ ವಸಂತ್ ಬುನ್ನನ್ ಅವರು ಅತ್ಯಂತ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಅಮೂಲ್ಯ ಸಹಕಾರ ನೀಡಿದರು. ಕಾರ್ಯದರ್ಶಿ ಶ್ರೀ ಶೇಖರ್ ಸಾಲ್ಯಾನ್ ಅವರು ಕಾರ್ಯಕ್ರಮದ ವಿವಿಧ ವ್ಯವಸ್ಥೆ ಹಾಗೂ ಸಮನ್ವಯ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದೇ ಸಂದರ್ಭದಲ್ಲಿ ಸಕ್ರಿಯ ಸಮಿತಿ ಸದಸ್ಯರಾದ ಶ್ರೀ ಪಾಂಡು ಮಡಿವಾಳ, ಶ್ರೀ ರಮೇಶ್ ಪಲಿಮಾರು ಹಾಗೂ ಮಾಜಿ ಅಧ್ಯಕ್ಷ ಶ್ರೀ ಗಣೇಶ್ ಗುಜರನ್ ಹಾಗೂ ಶ್ರೀ ಮಯಿಲಾ ಬಂಗೇರ ಅವರು ಕಾರ್ಯಕ್ರಮದ ಸಿದ್ಧತೆ ಮತ್ತು ವ್ಯವಸ್ಥೆಗಳಲ್ಲಿ ಶ್ರಮವಹಿಸಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದರು.

ಹೊಸದಾಗಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಶ್ರೀ ರಮೇಶ್ ಕುಂದರ್, ಶ್ರೀ ಶೈಲೇಶ್ ಪುತ್ತ್ರನ್ ಹಾಗೂ ಶ್ರೀ ಸುಂದರ್ ಗುಜರನ್ಹಾಗೂ ಮೋಹನ್ ಕುಂದರ್ ಅವರು ಸಹ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಸಮಯ ಮತ್ತು ಶ್ರಮವನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು. ಇವರ ಉತ್ಸಾಹ ಮತ್ತು ಸಹಕಾರವು ಸಂಘದ ಮುಂದಿನ ದಿನಗಳ ಉತ್ತಮ ಬೆಳವಣಿಗೆಗೆ ಆಶಾದಾಯಕವಾಗಿದೆ.

ಆಟಿಡೊಂಜಿ ದಿನ ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಸಹೋದರತ್ವ ಮತ್ತು ಸಂಘಟನೆಯ ಒಗ್ಗಟ್ಟನ್ನು ಪ್ರತಿಬಿಂಬಿಸುವ ಒಂದು ಸುಂದರ ವೇದಿಕೆಯಾಗಿ ಮೂಡಿಬಂದಿತು.

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಸಮಿತಿ ಸದಸ್ಯರು, ಮಹಿಳಾ ಘಟಕದ ಸದಸ್ಯರು, ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಸಂಘದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ಎಲ್ಲರ ಒಗ್ಗಟ್ಟು, ಸಹಕಾರ, ಸೇವಾ ಮನೋಭಾವ ಮತ್ತು ಸಾಂಸ್ಕೃತಿಕ ಕಾಳಜಿಯಿಂದ ಈ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣ ಹಾಗೂ ಸ್ಮರಣೀಯವಾಗಿ ಕೊನೆಗೊಂಡ ಬಳಿಕ ವಲಯದ ಅಧ್ಯಕ್ಷರಿಗೆ ಧನ್ಯವಾದ ಗೈದರು….



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ – ಭಾಯಂದರ್ ಶಾಖೆಯ ಮಹಿಳಾ ವಿಭಾಗ, ಯುವ ವಿಭಾಗದ ಆಶ್ರಯದಲ್ಲಿ ಆಟಿಡೊಂಜಿ ಕೂಟ.

Mumbai News Desk

ಸ್ಮಿತಾ ಬೆಳ್ಳೂರ್ ಯವರು  ಸಂಗೀತ  ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು

Mumbai News Desk

2023/24 ಎಚ್ ಎಸ್ ಸಿ . ಪರೀಕ್ಷೆಯಲ್ಲಿ  ಆಶಿಶ್ ಅಶೋಕ್ ಕುಲಾಲ್ ಶೇ.84.33%

Mumbai News Desk

ಮುಂಬೈ ವಿಶ್ವವಿದ್ಯಾಲಯ ಕನ್ನಡ ಎಂ.ಎ ಫಲಿತಾಂಶ: ಶ್ಯಾಮಲಾ ಉಚ್ಚಿಲ್ ಪ್ರಥಮ ಸ್ಥಾನ

Mumbai News Desk

ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ದೇವೇಂದ್ರ ಬುನ್ನಾನ್ ನಿಧನ

Mumbai News Desk

ಭಾಯಂದ‌ರ್  ಶ್ರೀ ಹನುಮಾನ್ ಭಜನಾ ಮಂಡಳಿ ವತಿಯಿಂದ ಸುಧಾಕರ್  ಶೆಟ್ಟಿ ಬಿಯಾಳಿ ಮಂದಾರ್ತಿಯವರ ಮುಂದಾಳತ್ವದಲ್ಲಿ  ಯಕ್ಷಗಾನ ‘ನಾಗಶ್ರೀ’ 

Mumbai News Desk