32 C
Mumbai
May 19, 2026
Mumbai News Kannada
ಕ್ರೀಡೆ

ವರ್ಲ್ಡ್ ಮಾಸ್ಟರ್ಸ್ ಸ್ಪೋರ್ಟ್ಸ್ ಚಾಂಪಿಯನ್‌ಪ್; ಶುಭಾ ಗುಜರನ್ ಇವರಿಗೆ ಎರಡು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕ





ಮುಂಬಯಿ, ಏಪ್ರಿಲ್ 17ರಿಂದ ಎಪ್ರಿಲ್ 20 ವರೆಗೆ ಜರಗಿದ ಥೈಲ್ಯಾಂಡ್‌ನಲ್ಲಿ ಜರಗಿದ ದಿ ವರ್ಲ್ಡ್ ಮಾಸ್ಟರ್ಸ್ ಸ್ಪೋರ್ಟ್ಸ್ ಚಾಂಪಿಯನ್‌ಪ್, ಶ್ರೀರಾಚ ಥೈಲ್ಯಾಂಡ್ 2026 ಇದರಲ್ಲಿ ಮಹಾರಾಷ್ಟ್ರ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಪರವಾಗಿ 30 ಆಟಗಾರರು ಭಾಗವಹಿಸಿದ್ದು ಮುಂಬಯಿಯ ವಿಲೇಪಾರ್ಲೆ ನಿವಾಸಿ, ರಜಕ ಸಂಘದ ಶುಭಾ ದಯಾನಂದ ಗುಜರನ್ ಅವರು ಎರಡು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಶುಭಾ ಗುಜರನ್ ಅವರು ಜಾವೆಲಿನ್ ಥ್ರೋ ದಲ್ಲಿ ಬೆಳ್ಳಿ ಪದಕ, ಶಾಟ್‌ಪುಟ್ನಲ್ಲಿ ಚಿನ್ನದ 7 ಪದಕ ಮತ್ತು ಡಿಸ್ಕಸ್ ಥ್ರೋ ದಲ್ಲಿ ಚಿನ್ನದ ಪದಕ ….ಹೀಗೆ ಮೂರು ಪದಕಗಳನ್ನು ಗೆದ್ದಿರುತ್ತಾರೆ. ಮೂಲತ ತಲಪಾಡಿಯವರಾದ ಶುಭಾ ಗುಜರನ್ ಪದವಿ ಶಿಕ್ಷಣವನ್ನು ಮಂಗಳೂರು ಬೆಸಂಟ್ ಕಾಲೇಜಲ್ಲಿ ಪೂರೈಸಿದವರು. ತನ್ನ ಶಾಲಾ ದಿನಗಳಿಂದಲೇ ಇವರಿಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ. : ಶಿಕ್ಷಕಿ ತಾಯಿ ಸುಂದರಿಯವರ ಮಾರ್ಗದರ್ಶನದಂತೆ ಇವರು ಖೋ-ಖೋ, ಬ್ಯಾಡ್‌ಮಿಂಟನ್, ಥ್ರೋಬಾಲ್, ರನ್ನಿಂಗ್ ಈ ಎಲ್ಲಾ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದವರು. ಮಂಗಳೂರು ಮೂಲದ ಮುಂಬಯಿಯ ಹೋಟೆಲ್ ಉದ್ಯಮಿ ದಯಾನಂದ ಗುಜರನ್ ಇವರೊಂದಿಗೆ 1984ರಲ್ಲಿ ಮಂಗಳೂರಿನ ಸಂಘನಿಕೇತನ ಸಭಾಗೃಹದಲ್ಲಿ ವಿವಾಹವಾಗಿ ಪತಿಯ ಜೊತೆಯಲ್ಲಿ ಮುಂಬಯಿಗೆ ಆಗಮಿಸಿದರು. ಮದುವೆಯಾದ 25 ವರ್ಷಗಳ ಬಳಿಕ ಇವರು ಪುನಃ ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸಲು ಮನಸ್ಸು ಮಾಡಿದರು. 2015ರಲ್ಲಿ ಮುಂಬಯಿಯಲ್ಲಿ ಏರ್ಪಡಿಸಿದ ಆಲ್ ಇಂಡಿಯಾ ‘ಮಾಸ್ಟರ್ಸ್ ಇಂಟರ್‌ನ್ಯಾಶನಲ್ ಅಥ್ಲೆಟಿಕ್ ಮೀಟ್‌ನಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನವನ್ನು ಪಡೆದಿರುವರು.

ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲಿ ಒಂದಾದ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುತ್ತಾರೆ. ವಯಸ್ಸ ನ್ನು ಲೆಕ್ಕಿಸದೆ ಬೇರೆ ಬೇರೆ ಕಡೆಗಳಲ್ಲಿ ಥ್ರೋ ಬಾಲ್ ಮತ್ತಿತರ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಶ್ರೀಮತಿ ಅಪರ್ಣಾ ಭಟ್ ಇವರಿಂದ ಸಂಗೀತ, ಭಜನೆ ಮೊದಲಾದುವುಗಳನ್ನು ಕಲಿತು ಮುಂಬಯಿಯಲ್ಲಿ ನಡೆಯುತ್ತಿರುವ ಭಜನಾ ಸ್ಪರ್ಧೆಗಳಲ್ಲಿಯೂ ಆಗಾಗ ಭಾಗವಹಿಸುತ್ತಿರುವರು. ಗೋರೆಗಾಂವ್ ಕರ್ನಾಟಕ ಸಂಘ ಏರ್ಪಡಿಸುತ್ತಿರುವ ಶೈಕ್ಷಣಿಕ ಪ್ರವಾಸದಲ್ಲಿ ಭಾಗವಹಿ ಇವರು ದೇಶ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಜನರ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಿದವರು. ತಾಯಿಗೆ ತಕ್ಕ ಮಕ್ಕಳು ಎಂಬಂತೆ ಮಗಳು ದಂತ ವೈದ್ಯೆ, ಪುತ್ರ ವರುಣ್ ಕಾಮನ್‌ವೆಲ್, ಜೂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ.



Related posts

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಮುಂಬಯಿ : ವಾರ್ಷಿಕ ಕ್ರೀಡೋತ್ಸವದ ಉದ್ಘಾಟನೆ

Mumbai News Desk

ಕಬಡ್ಡಿ ವಿಶ್ವಕಪ್: ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸಿ ಸತತ ಎರಡನೇ ಬಾರಿಗೆ ಕಬಡ್ಡಿ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡ

Mumbai News Desk

ಕುಂದರ್ ಮೂಲಸ್ಥಾನ ಸಭಾ ಮುಂಬಯಿ, ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2025

Mumbai News Desk

ಗಿರೀಶ್ ಶೆಟ್ಟಿ ತೆಳ್ಳಾರ್ ನೇತೃತ್ವದಲ್ಲಿ ಮೇ 3 ರಂದು  ಮುನಿಯಾಲಿನಲ್ಲಿ ರಾಷ್ಟ್ರೀಯ ಕಬ್ಬಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ರಾಷ್ಟ್ರ ಮಟ್ಟದ ಪ್ರೊ ಕಬಡ್ಡಿ

Mumbai News Desk

ವಸಯಿ ಕಲಾ ಕ್ರಿಡೋತ್ಸವ ದಲ್ಲಿ  ಥ್ರೋ ಬಾಲ್ ಆಟದಲ್ಲಿ ಉಷಾ ಶ್ರೀಧರ ಶೆಟ್ಟಿ  ಕರ್ನಿರೆ ಇವರ ನಾಯಕತ್ವ ತಂಡಕ್ಕೆ  ಪ್ರಥಮ ಸ್ಥಾನ . 

Mumbai News Desk

ವರ್ಲ್ಡ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ –ಉದಯ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಭಾರತ ತಂಡ

Mumbai News Desk