29 C
Mumbai
August 12, 2026
Mumbai News Kannada
ಪ್ರಕಟಣೆ

ಮೆಹತಾ ಕಾಲೇಜ್ ಐರೋಲಿ: ಜೂನ್ 27 ರಂದು ಬೆಳ್ಳಿ ಹಬ್ಬದ ನಿಮಿತ್ತ ವಿಶೇಷ ಕಾರ್ಯಕ್ರಮ: ಪರಂಪರೆಯಿಂದ ಪ್ರಗತಿಗೆ ಸಂವಾದ, ಸಾಧಕರಿಗೆ ಗೌರವಾರ್ಪಣೆ





ಮುಂಬೈ, ಜೂನ್ 20, ಮುಂಬೈನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಮೆಹತಾ ಕಾಲೇಜ್,ಐರೋಳಿ ಶನಿವಾರ, ಜೂನ್ 27, 2026 ರಂದು ಬೆಳಿಗ್ಗೆ 11:00 ಗಂಟೆಗೆ ಪರಂಪರೆಯಿಂದ ಪ್ರಗತಿಗೆ ವಿಶೇಷ ಸಂವಾದ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಸಾಧಕರನ್ನು ಗೌರವಿಸುವ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದೆ.

ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜ ಐರೋಲಿ,ನವಿ ಮುಂಬಯಿ ರಜತಮಹೋತ್ಸವದ ಅಂಗವಾಗಿ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಮತ್ತು ಶಿಕ್ಷಣತಜ್ಞರಿಗಾಗಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಸಂಯೋಜನೆ ಯೊಂದಿಗೆ “ಪರಂಪರೆಯಿಂದ ಪ್ರಗತಿಗೆ: ಭಾರತೀಯ ಜ್ಞಾನ ಪರಂಪರೆ ಈ ಹಿನ್ನೆಲೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದ್ದು ಇದೇ ಸಂದರ್ಭದಲ್ಲಿ ತುಳು ಕನ್ನಡ ಶಿಕ್ಷಣ ಸಂಸ್ಥೆಯ ಸಾಧಕರಿಗೆ ಗೌರವಾರ್ಪಣೆ ಸಹ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಹಿತ್ಕ ಹಾಗು ಸಾಂಸ್ಕೃತಿಕ ಕ್ಷೇತ್ರದಲ್ಲಿಸಾಧನೆಗೈದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮವೂ ಏರ್ಪಡಿಸಲಾಗಿದೆ.

ಮುಂಬೈ ವಿಶ್ವವಿದ್ಯಾಲಯ ಪ್ರಕಟಿಸಿದ ಭಾರತೀಯ ಜ್ಞಾನ ಪರಂಪರೆ ಕನ್ನಡ ಆವೃತ್ತಿಯ ಹಿನ್ನೆಲೆಯಲ್ಲಿ ಒಂದು ಸಂವಾದ ಕಾರ್ಯಕ್ರಮವನ್ನು ವಿವಿಧ ವಿಷಯ ತಜ್ಞರು ಅಂದು ನಡೆಸಿಕೊಡಲಿದ್ದಾರೆ.

ಮೆಹತಾ ಕಾಲೇಜ್ ಬೆಳ್ಳಿ ಹಬ್ಬದ ಅಂಗವಾಗಿ ಏರ್ಪಡಿಸಿದ ಈ ಕಾರ್ಯಕ್ರಮಕ್ಕೆ ಹಲವಾರು ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಹಾಗು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕರ್ನಾಟಕ ಸಂಘ ಡೊಂಬಿವಿಲಿ, ವಿದ್ಯಾ ಪ್ರಸಾರಕ ಮಂಡಲ ಮುಳುಂದ, ಎನ್ ಕೆ ಇ ಎಸ್ ವಡಾಲಾ, ಬಂಟರ ಸಂಘ ಕುರ್ಲಾ, ಬಂಟ್ಸ್ ಹೈಯರ್ ಎಜುಕೇಶನ್ , ಜುಯಿನಗರ, ಮೊಗವೀರ ಶಿಕ್ಷಣ ಸಂಸ್ಥೆ ಅಂಧೇರಿ , ಚೆಂಬೂರ್ ಕರ್ನಾಟಕ ಸಂಘ, ಕನ್ನಡ ಭವನ, ಗುರುನಾರಾಯಣ ರಾತ್ರಿ ಶಾಲೆ (ಬಿಲ್ಲವರ ಅಸೋಸಿಯೇಷನ್ ಪ್ರಾ ಯೋಜಿತ), ನವೋದಯ ಕನ್ನಡ ಸಂಘ, ಕಿಶನ್ ನಗರ , ಕನ್ನಡಭವನ ಶಾಲೆ ಮುಂಬಯಿ , ನಿಜಲಿಂಗಪ್ಪಾ ಶಾಲೆ ಅಂಬರನಾಥ್,ಇತ್ಯಾದಿ ಸಂಘಟನೆಗಳು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಪಡೆದಿವೆ, ಕನ್ನಡ ಸಾಹಿತ್ಯ ಹಾಗು ಸಂಸ್ಕೃತಿ ಮತ್ತು ಸಂಘಟನೆಗಳಲ್ಲಿ ಸಾಧನೆಗೈದ ಮಹನೀಯರನ್ನು ಆಹ್ವಾನಿಸಲಾಗಿದೆ. ಕನ್ನಡ ನಾಡು,ನುಡಿಗಾಗಿ ಮತ್ತು ಕನ್ನಡಾ ಸಂಸ್ಕೃತಿ ಗಾಗಿ ಹಲವಾರು ಸಂಸ್ಥೆಗಳು ಗಳು ಮುಂಬಯಿ ಯಲ್ಲಿ ಕನ್ನಡದ ನೆಲದ ಕಂಪನ್ನು ಹರಡುತ್ತಿದೆ, ಈ ಸಂಸ್ಥೆಗಳನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು.ಜ್ಞಾನ ವಿಕಾಸ ಮಂಡಳದ ಮೆಹತಾ ಮಹಾವಿದ್ಯಾಲಯ ಕಳೆದ 25 ವರ್ಷಗಳಿಂದ ನವಿ ಮುಂಬಯಿ ಐರೋಲಿ ಯಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿದೆ. ನ್ಯಾಕ್ ನಿಂದ “A+” ಶ್ರೇಣಿಯನ್ನು ಪಡೆದಿರುವ ಈ ಶಿಕ್ಷಣ ಸಂಸ್ಥೆ ವಿವಿಧ ತರಗತಿಗಳನ್ನು ಹೊಂದಿದ್ದು ಸುಮಾರು 4,000 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕೌಶಲ್ಯ ಶಿಕ್ಷಣ, ಸಂಶೋಧನಾ ಕ್ಷೇತ್ರ , ಉದ್ಯೋಗ ಮೇಳ, ವಿವಿಧ ರೀತಿಯ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ಸಲ್ಲಿಸುತ್ತಿದೆ. 25 ವರ್ಷಗಳು ಸಂದ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡೊಳ್ಳುತ್ತಿದೆ.ಈ ವಿಶೇಷ ಕಾರ್ಯಕ್ರಮಕ್ಕೆ
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಮುಖ್ಯ ಅತಿಥಿಗಳಾಗಿ ಮತ್ತು ಕರ್ನಾಟಕ ಮಲ್ಲದ ಸಂಪಾದಕಾರಾದ ಹಿರಿಯ ಪತ್ರಕರ್ತ ಶ್ರೀ ಚಂದ್ರಶೇಖರ ಪಾಲೆತ್ತಾಡಿ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವಿ.ಎನ್..ಹೆಗಡೆ ಅವರು ವಹಿಸಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಸಂಘಟಿಕರು, ಕನ್ನಡ ಸಾಹಿತ್ಯ ಸಂಸ್ಕೃತಿ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಸಾಹಿತಿಗಳು ಭಾಗವಹಿಸಲು ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜ ಐರೋಲಿಯ ಪ್ರಧಾನ ಕಾರ್ಯದರ್ಶಿ ಶ್ರೀ ವ್ಯಾಸಮೂರ್ತಿ ಮುಗಳಿ ಮತ್ತು ಪ್ರಾಚಾರ್ಯ ಡಾ ಬಿ.ಆರ್.ದೇಶಪಾಂಡೆ ಅವರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 7021581383, 9769081632 ಮತ್ತು 9960264749 ಸಂಪರ್ಕಿಸಲು ಕೋರಲಾಗಿದೆ.



Related posts

ಮೂಲ ಸಿರಿ ಕುಮಾರ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ, ಪಾಂಗಾಳ, ವಾರ್ಷಿಕ ಪಾಂಗಾಳ ಆಯನ ಸಿರಿಜಾತ್ರೆ

Mumbai News Desk

ಮಾ. 15, ತುಳು ಸಂಘ, ಬೋರಿವಲಿ 15ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಡಿ.10 ರಂದು ಚಿತ್ರಪು ಬಿಲ್ಲವರ ಸಂಘ (ರಿ) ಮುಂಬಯಿ, 78ನೇ ವಾರ್ಷಿಕ ಮಹಾಸಭೆ

Mumbai News Desk

‘AATIDONJI DINA 2025’ Festival is all set to light up Dubai on 14th September 2025,

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 34ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ: ನವೆಂಬರ್ 30ರಂದು ವಿಜೃಂಭಣೆಯ ಆಚರಣೆ

Mumbai News Desk