35 C
Mumbai
May 10, 2026
Mumbai News Kannada
ಪ್ರಕಟಣೆ

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ





ಮುಂಬಯಿಯ ಸಾಫಲ್ಯ ಸೇವಾ ಸಂಘದ ತ್ರೈಮಾಸಿಕ ‘ಸಾಫಲ್ಯ’ ವು ಸಣ್ಣ ಕಥೆ ಮತ್ತು ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.
ಕನ್ನಡದಲ್ಲಿ ಬರೆದ ಸಣ್ಣ ಕಥೆ ಯಾ ಲೇಖನ ಸ್ಪರ್ಧೆಯಲ್ಲಿ ವಿಜೇತರದವರಿಗೆ ಪ್ರಥಮ ರೂ 3000/-, ದ್ವಿತೀಯ ರೂ 2000/- ಮತ್ತು ತೃತೀಯ ರೂ 1000/- ಬಹುಮಾನ ನೀಡಲಾಗುವುದು.


ನಿಯಮಗಳು :
1) ಈ ಸ್ಪರ್ಧೆಗೆ ಕಳುಹಿಸಬೇಕಾದ ಸಣ್ಣ ಕಥೆ ಯಾ ಲೇಖನ ಹಿಂದೆ ಎಂದೂ ಪ್ರಕಟಗೊಂಡಿರಬಾರದು.
2) ಕೈ ಬರಹದಲ್ಲಿ ಎಂಟು ಪುಟಗಳನ್ನು( DTP 4 ಪುಟಗಳು )ಫುಲ್ ಸ್ಕೇಪ್ ಪೇಪರಿನ ಒಂದೆ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು.
3) ಕಾರ್ಬನ್ ಅಥವಾ ಜೆರಾಕ್ಸ್ ಪ್ರತಿಗಳು, ಭಾಷಾಂತರ ಬರಹಗಳು ಸ್ಪರ್ಧೆಗೆ ಅರ್ಹವಾಗಿರುವುದಿಲ್ಲ.
4) ಕಥೆಗಾರರು ಯಾ ಲೇಖಕರು ತಮ್ಮ ಹೆಸರು ವಿಳಾಸ (ಪಿನ್ ಕೋಡ್) ಸಹಿತ ದೂರವಾಣಿ ಅಥವಾ ಮೊಬೈಲ್ ನಂಬರ್ ಅನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಭಾವಚಿತ್ರವನ್ನು ಕ್ರತಿಯಡನೆ ಲಗತ್ತಿಸಿರಬೇಕು.
5) ಕಥೆ ಯಾ ಲೇಖನದ ಪುಟಗಳಲ್ಲಿ ಕಥೆಗಾರರ, ಲೇಖಕರ ಹೆಸರು ಇರಬಾರದು.
6) ರಾಜಕೀಯ ಕ್ಷೇತ್ರವನ್ನು ಹೊರತುಪಡಿಸಿ ಆರ್ಥಿಕ, ಸಾಮಾಜಿಕ , ಸಾಹಿತ್ಯಕ, ಶೈಕ್ಷಣಿಕ, ಔದ್ಯಾಮಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳಿರಬೇಕು.
7) ವಿಜೇತರಿಗೆ ಚೆಕ್ ಮೂಲಕ ಬಹುಮಾನ ಮತ್ತು ಪ್ರಮಾಣ ಪತ್ರ ಕಳುಹಿಸಲಾಗುವುದು.
8) ಬಹುಮಾನ ಗಳಿಸಿದ ಹಾಗೂ ಮೆಚ್ಚುಗೆ ಪಡೆದ ಕೃತಿಗಳನ್ನು “ಸಾಫ್ಫಲ್ಯ” ತ್ರೈಮಾಸಿಕದ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು.
9) ಸ್ಪರ್ಧೆಗೆ ಬಂದ ಬರಹಗಳಲ್ಲಿ ಆಯ್ದ ಲೇಖನಗಳನ್ನು ಕ್ರಮವಾಗಿ ಪ್ರಕಟಿಸಲಾಗುವುದು.
10) ಸ್ಪರ್ಧೆಗೆ ಬಂದ ಕೃತಿಗಳನ್ನು ಯಾವುದೇ ಕಾರಣಕ್ಕೂ ಹಿಂತಿಸಲಾಗುವುದಿಲ್ಲ, ಬರಹಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 30- 9 -2024.

ಕಳುಹಿಸಬೇಕಾದ ವಿಳಾಸ :
The Editor ,
“Saphalya Kannada Quarterly”
The Saphalya Seva Sangha (Regd),
603, Kesar Kunj, Sai Rath Co-op Hsg Society
Telly Galli, Andheri (E) Mumbai – 400 069.

.



Related posts

ಮೇ 15: ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬ ಆಚರಣೆ.

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬಯಿ: ಫೆ. 22ರಂದು ವಾರ್ಷಿಕ ಮಹಾಪೂಜೆ, ಮಹಾಸಭೆ

Mumbai News Desk

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ – ಜು. 20ಕ್ಕೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಯಕ್ಷಗಾನ ಪ್ರದರ್ಶನ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk