27.9 C
Mumbai
July 28, 2026
Mumbai News Kannada
ಸುದ್ದಿ

ಸರಳ ಸಜ್ಜನಿಕೆಯ ಸಮಾಜ ಸೇವಕ ಕೃಷ್ಣ ಶೀನ ಸಾಲಿಯಾನ್ ನಿಧನ







ಮುಂಬಯಿ/ಮೂಡಬಿದ್ರೆ: ಸರಳ ಸಜ್ಜನಿಕೆಯ ವ್ಯಕ್ತಿತ್ವದ, ಎಲ್ಲರಿಗೂ ಸದಾ ಪರೋಪಕಾರವನ್ನು ಬಯಸುತ್ತಿದ್ದ ಗುಣವಂತ, ಮುಂಬಯಿ ಭಾಯಂದರ್ ನಿವಾಸಿ ಹಾಗೂ ಕಡಂದಲೆ ಬೋಳಂತೇಮನೆ ಮೂಲದ ಶ್ರೀ ಕೃಷ್ಣ ಶೀನ ಸಾಲಿಯಾನ್ (58 ವರ್ಷ) ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಅಪಾರ ಬಂಧು-ಮಿತ್ರರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಮೃತರು ಮುಂಬಯಿ ಜಿಮ್ಖಾನದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಈ ವರ್ಷದ ಮಧ್ಯಭಾಗದಲ್ಲಿ ನಿವೃತ್ತಿ ಹೊಂದುವವರಿದ್ದರು. ಮೃತರು ಓರ್ವ ಮಗ ಕೌಶಿಕ್ ಸಾಲಿಯಾನ್, ಪತ್ನಿ ಸುಜಾತಾ ಸಾಲಿಯಾನ್, ಸಹೋದರ ಶೇಖರ ಸಾಲಿಯಾನ್, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಕೃಷ್ಣ ಸಾಲಿಯಾನ್ ಅವರು ಶ್ರೀ ರಜಕ ಸಂಘ ಮುಂಬಯಿ ಹಾಗೂ ಕೋಟೆ ಮುಂಬಯಿ ವಿಭಾಗದ ಕನ್ನಡ ಕಲಾ ಸಮಾಜದ ಅಜೀವ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ತಮ್ಮ ಅಮೂಲ್ಯವಾದ ಸಮಯವನ್ನು ಸಮಾಜದ ಏಳಿಗೆಗಾಗಿ ಮೀಸಲಿಟ್ಟು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಪಾರ ಸೇವೆ ಸಲ್ಲಿಸುತ್ತಾ ಬಂದವರಾಗಿದ್ದರು. ಇವರ ಅಕಾಲಿಕ ಅಗಲಿಕೆಗೆ ಶ್ರೀ ರಜಕ ಸಂಘದ ಅಧ್ಯಕ್ಷರಾದ ಸಿಎ ವಿಜಯ ಕುಂದರ್, ಕನ್ನಡ ಕಲಾ ಸಮಾಜದ ಕಾರ್ಯದರ್ಶಿ ವಸಂತ್ ಬುನ್ನಾನ್, ನಾಲಾಸೋಪಾರದ ಮಣಿಕಂಠ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಸ್ಥಾಪಕ ಮುಖ್ಯಸ್ಥ ಸದಾಶಿವ ಕರ್ಕೇರಾ, ಬೊಂಬೆ ಜಿಮ್ಖಾನದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಅಪಾರ ತುಳು-ಕನ್ನಡಿಗರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಮತ್ತು ಅವರ ಕುಟುಂಬವರ್ಗಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.



Related posts

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರೋಪ . ವಿಶೇಷ ಸಂಚಿಕೆ ಲೋಕಾರ್ಪಣೆ.

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (MPL 2026): ಹರಾಜು ಪ್ರಕ್ರಿಯೆ ಯಶಸ್ವಿ; ₹4 ಲಕ್ಷಕ್ಕೆ ಕುಂದಾಪುರ ಲೆಜೆಂಡ್ಸ್ ಮುಂಚೂಣಿಯಲ್ಲಿ

Mumbai News Desk

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಿರುಗಾಳಿಗೆ ಸಿಲುಕಿ ಭೀಕರ ಅಪಘಾತದಿಂದ ಪಾರು: ಜುಹು ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ಜೀವಿತ್ ಬಿ ಕುಲಾಲ್  88.50 ಅಂಕ

Mumbai News Desk

ಭಾರತ್ ಬ್ಯಾಂಕ್‌ಗೆ NAFCUB ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್ ವತಿಯಿಂದ ಶ್ರೇಷ್ಠ ಸೈಬರ್‌ ಸೆಕ್ಯೂರಿಟಿ ಪ್ರಶಸ್ತಿ ಹಾಗೂ ಶ್ರೇಷ್ಠ ಅಪಾಯ ನಿರ್ವಹಣಾ ಪ್ರಶಸ್ತಿ

Mumbai News Desk